ಎಜೆ ಆಸ್ಪತ್ರೆಯಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ
ಮಂಗಳೂರು, ಜ.26: ವಿಶ್ವಕ್ಯಾನ್ಸರ್ ದಿನಾಚರಣೆ (ಫೆಬ್ರವರಿ 4)ಯ ಅಂಗವಾಗಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಫೆ. 1ರಿಂದ 4ರವರೆಗೆ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಎ.ಜೆ.ಕ್ಯಾನ್ಸರ್‌ಕೇಂದ್ರದಲ್ಲಿ ಹಮ್ಮಿಕೊಂಡಿದೆ.
ಶಿಬಿರದಲ್ಲಿ ನೋಂದಾವಣೆ ಮತ್ತು ವೈದ್ಯರೊಂದಿಗೆ ಸಂದರ್ಶನ ಉಚಿತವಾಗಿದೆ. ಈ ಸಂದರ್ಭ ಮಹಿಳೆಯರಿಗೆ ಮ್ಯಾನೋಗ್ರಾಫಿ, ಮಲ ರಕ್ತ ತಪಾಸಣೆ, ವೈದ್ಯಕೀಯ ವೌಲ್ಯಮಾಪನ, ಕೆಳಹೊಟ್ಟೆಯ ಅಲ್ಟ್ರಾಸೌಂಡ್, ವೈದ್ಯಕೀಯ ವೌಲ್ಯಮಾಪನ ಹಾಗೂ ಮಹಿಳೆಯರಿಗೆ ಮಲ ರಕ್ತತಪಾಸಣೆ, ಕೆಳಹೊಟ್ಟೆಯ ಅಲ್ಟ್ರೌಸೌಂಡ್, ಎದೆಯ ಎಕ್ಸ್‌ರೇ, ವೈದ್ಯಕೀಯ ವೌಲ್ಯಮಾಪನ ಪ್ರತಿಯೊಬ್ಬರಿಗೆ ತಲಾ 1000 ರೂ. ಪ್ಯಾಕೇಜ್ ದರದಲ್ಲಿ ನಡೆಸಲಾಗುವುದು ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.
ಈ ಕೆಳಗಿನ ರೋಗ ಗುಣಲಕ್ಷಣಗಳನ್ನು ಹೊಂದಿರುವವರು ಶಿಬಿರದಲ್ಲಿ ಭಾಗವಹಿಸಬಹುದು. ಸ್ತನದಲ್ಲಿ ಊತ ಮತ್ತು ಕೆಳಹೊಟ್ಟೆಯಲ್ಲಿ ಗಡ್ಡೆ. ಮುಟ್ಟು ನಿಂತ ನಂತರ ಮರುರಕ್ತ ಸ್ರಾವ ಮತ್ತು ಬಿಳಿ ಸ್ರಾವ, ಗುಣವಾಗದ ಕೆಮ್ಮು, ಸ್ವರದಲ್ಲಿಗಡುಸುತನ ಮತ್ತು ನುಂಗಲು ಕಷ್ಟವಾಗುದ್ದಲ್ಲಿ, ನಾಲಗೆ ಮತ್ತು ಕೆನ್ನೆಯಲ್ಲಿ ಹುಣ್ಣು ಅಥವಾ ಬೆಳವಣಿಗೆ ಮತ್ತು ಕುತ್ತಿಗೆಯಲ್ಲಿ ಊತ. ಅಜೀರ್ಣ, ಆಗಾಗ ಮಲ ವಿಸರ್ಜನೆಯ ಬಯಕೆ, ಹಸಿವಿಲ್ಲದಿರುವುದು ಮತ್ತು ಶೀಘ್ರವಾಗಿ ತೂಕದಲ್ಲಿ ಇಳಿತ. ತೀವ್ರರಕ್ತ ಹೀನತೆ, ಆಗಾಗ ಸೋಂಕು ಉಂಟಾಗುವುದು, ಎಲುಬುಗಳಲ್ಲಿ ನೋವು ಕಾಣಿಸುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗೆ ಬೆಳಗ್ಗೆ 9.00 ರಿಂದ ಸಂಜೆ 5.00ರ ಒಳಗೆ) 0824 6613635 ಅಥವಾajccentre@gmail.com
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ಸಮಗ್ರಕ್ಯಾನ್ಸರ್‌ಕೇರ್ ಸೆಂಟರ್, ವೈದ್ಯಕೀಯಅಂಕೋಲಜಿ, ವಿಕಿರಣಗ್ರಂಥಿಅಂಕೋಲಜಿ, ಶಸ್ತ್ರಚಿಕಿತ್ಸಾ ಅಂಕೋಲಜಿ, ಕ್ಯಾನ್ಸರ್ ನೋವು ನಿರ್ವಹಣೆ, ನ್ಯೂಕ್ಲಿಯರ್ ಮೆಡಿಸಿನಂತಹ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಲ್ಲಿಸುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಕೇಂದ್ರವಾಗಿದೆ ಎಂದು ಆಸ್ಪತ್ರೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.







