ಉಡುಪಿ : ಮತದಾನ ದಿನದಂದು ಸಂತೆ ನಿಷೇಧ
ಉಡುಪಿ, ಜ.26: ರಾಜ್ಯ ಚುನಾವಣಾ ಆಯೋಗ ಉಡುಪಿ ಜಿಲ್ಲೆಯಲ್ಲಿ ೆ.20ರಂದು ಜಿಪಂ ಹಾಗೂ ತಾಪಂಗಳಿಗೆ ಮತದಾನ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ. ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆ ಯನ್ನು ಖಚಿತಪಡಿಸುವುದಕ್ಕಾಗಿ ಪಂಚಾಯತ್ ಪ್ರದೇಶದಲ್ಲಿ ನಡೆಯುವ ಸಂತೆಯನ್ನು ನಿಷೇಸಿ ಜಿಲ್ಲಾ ಚುನಾವಣಾಕಾರಿಯಾಗಿರುವ ಜಿಲ್ಲಾಕಾರಿ ಡಾ.ವಿಶಾಲ್ ಆರ್. ಆದೇಶ ಹೊರಡಿಸಿದ್ದಾರೆ.
ಮತದಾನದ ದಿನದಂದು ನಡೆಯುವ ಯಾವುದೇ ಸಂತೆಯಿಂದ ಮತದಾರ ರಿಗೆ ಆಗಬಹುದಾದ ಅನಾನುಕೂಲತೆಗಳನ್ನು ತಪ್ಪಿಸುವ ಹಿತದೃಷ್ಟಿಯಿಂದ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಪಂ ವ್ಯಾಪ್ತಿಯ 76 ಹಾಲಾಡಿ, ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಪಂ ವ್ಯಾಪ್ತಿಯ ಚೇರ್ಕಾಡಿ, ಶಿರ್ವ ಗ್ರಾಪಂ ವ್ಯಾಪ್ತಿಯ ಪಿಲಾರು, ಸಾಂತೂರು, ಯೇಣಗುಡ್ಡೆ, ಆತ್ರಾಡಿ ಗ್ರಾಪಂ ವ್ಯಾಪ್ತಿಯ ಹಿರೇಬೆಟ್ಟು ಹಾಗೂ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಮುದ್ರಾಡಿಗಳಲ್ಲಿ ಮತದಾನದ ದಿನದಂದು ನಡೆಯುವ ವಾರದ ಸಂತೆಯನ್ನು ನಿಷೇಸಿ ಜಿಲ್ಲಾಕಾರಿಗಳು ಆದೇಶ ಹೊರಡಿಸಿದ್ದಾರೆ.
Next Story





