ಅವಳಿ ಸ್ಫೋಟಕ್ಕೆ 15 ಬಲಿ
ಡಮಾಸ್ಕಸ್,ಜ.26: ಅಂತರ್ಯುದ್ಧದಿಂದ ಜರ್ಝರಿತ ವಾಗಿರುವ ಸಿರಿಯಾದಲ್ಲಿ, ಸರಕಾರಿ ಪಡೆಗಳ ನಿಯಂತ್ರಣದಲ್ಲಿರುವ ಹೋಸ್ ನಗರದಲ್ಲಿ ಮಂಗಳವಾರ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಮೊದಲಿಗೆ ಬಾಂಬ್‌ಗಳನ್ನು ಇರಿಸಲಾಗಿದ್ದ ಕಾರೊಂದು ಸ್ಫೋಟಿಸಿತು. ಅದರ ಬೆನ್ನಲ್ಲೇ ಆತ್ಮಹತ್ಯಾ ಬಾಂಬರ್ ಒಬ್ಬಾತ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಸಿರಿಯಾದ ಆಳುವ ವರ್ಗವಾದ ಅಲ್ವಾಯಿಟ್ ಪಂಗಡದರು ಅಧಿಕ ಸಂಖ್ಯೆಯಲ್ಲಿರುವ ಅಲ್-ಝಹ್ರಾ ವಸತಿ ಪ್ರದೇಶದಲ್ಲಿ ಈ ಭಯೋತ್ಪಾದಕ ದಾಳಿಗಳು ನಡೆದಿವೆ. ಹೋಮ್ಸ್ ಸೇರಿದಂತೆ ಸಿರಿಯ ಸರಕಾರಕ್ಕೆ ನಿಷ್ಠವಾಗಿರುವ ಪ್ರದೇಶಗಳ ಮೇಲೆ ಬಂಡುಕೋರರು ರಾಕೆಟ್ ಹಾಗೂ ಮೋರ್ಟಾರ್ ದಾಳಿಗಳನ್ನು ಮುಂದುವರಿಸಿದ್ದಾರೆ.
Next Story





