ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ: ಜಬ್ಬಾರ್ ಸಮೋ

ಕೊಣಾಜೆ, ಜ.26: ವಿದ್ಯಾರ್ಥಿಗಳು ಸ್ವತಂತ್ರ ವ್ಯಕ್ತಿತ್ವ, ಅಭಿವ್ಯಕ್ತಿ ಕೌಶಲ, ಭಾಷಾ ಪ್ರೌಢಿಮೆ ಹಾಗೂ ಸೌಹಾರ್ದ ಬೆಳೆಸಿಕೊಂಡಲ್ಲಿ ಭಾರತ ಜಗತ್ತಿನ ಎಲ್ಲ ದೇಶಗಳನ್ನೂ ಮೀರಿ ಬೆಳೆಯಲು ಸಾಧ್ಯ ಎಂದು ತಾಳಮದ್ದಲೆ ಅರ್ಥದಾರಿ ಜಬ್ಬಾರ್ ಸಮೋ ಅಭಿಪ್ರಾಯಪಟ್ಟರು.ನೆಹರೂ ಯುವ ಕೇಂದ್ರ ಸಹಯೋಗದಲ್ಲಿ ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಾಂಶುಪಾಲ ಡಾ. ಗಿರಿಧರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಂಕರ್ ಭಟ್ ಕೊಳ್ತಮಜಲು ಅತಿಥಿಗಳಾಗಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕ ನಂದಕಿಶೋರ್ ಎಸ್. ಸ್ವಾಗತಿಸಿದರು. ಲೋಕೇಶ್ ರೈ ನಿರೂಪಿಸಿದರು. ಮಾನಸಾ ವಂದಿಸಿದರು.
Next Story





