Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಮಿಳುನಾಡಿನಲ್ಲೊಂದು ವೇಮುಲಾ ಪ್ರಕರಣ

ತಮಿಳುನಾಡಿನಲ್ಲೊಂದು ವೇಮುಲಾ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ26 Jan 2016 11:43 PM IST
share

ಹೈದರಾಬಾದ್ ಯುನಿವರ್ಸಿಟಿಯಲ್ಲಿ ಪ್ರತಿಭಾವಂತ ದಲಿತ ಸಂಶೋಧಕನೊಬ್ಬ ವಿಶ್ವವಿದ್ಯಾನಿಲಯದ ದೌರ್ಜನ್ಯಗಳನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಇತ್ತ ತಮಿಳು ನಾಡಿನ ಕಲ್ಲಕುರುಚ್ಚಿಯ ಎಸ್.ವಿ.ಎಸ್. ಯೋಗ ಆ್ಯಂಡ್ ನ್ಯಾಚುರೋಪತಿ ಕಾಲೇಜಿನ ಮೂವರು ತರುಣಿಯರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆಳದಲ್ಲಿ ಎರಡು ಪ್ರಕರಣಗಳೂ ಪರಸ್ಪರ ಸಂಬಂಧವನ್ನು ಹೊಂದಿವೆ.ಹೈದರಾಬಾದ್‌ನ ಘಟನೆ ಸಾಮಾಜಿಕ ಮತ್ತು ಜಾತೀಯ ಕಾರಣಕ್ಕಾಗಿ ಸಂಬಂಧಿಸಿದ್ದಾದರೆ ತಮಿಳುನಾಡಿನಲ್ಲಿ ಮೂವರು ವಿದ್ಯಾರ್ಥಿನಿಯ ಆತ್ಮಹತ್ಯೆ ಆರ್ಥಿಕ ಕಾರಣಗಳಿಗೆ ಸಂಬಂಧಪಟ್ಟದ್ದು.ಎರಡು ಘಟನೆಗಳಲ್ಲಿ ಸಮಾನವಾದ ಅಂಶವೊಂದು ಇದ್ದರೆ, ಅದು ಕಾಲೇಜು ಆಡಳಿತ ಮಂಡಳಿಗೆ ಸಂಬಂಧಪಟ್ಟಿರುವ ಮನಸ್ಥಿತಿ.ಶಿಕ್ಷಣವೆನ್ನುವುದು ಹೇಗೆ ಜಾತಿಯ ಹಿಡಿತದಲ್ಲಿ ನಲುಗುತ್ತಿದೆಯೋ ಹಾಗೆಯೇ ಉದ್ಯಮಿಗಳ ಹಿಡಿತದಲ್ಲೂ ನಲುಗುತ್ತಿವೆ.ಇದರ ನೇರ ಬಲಿಪಶುಗಳು ಅಂತಿಮವಾಗಿ ತಳಸ್ತರದ ಜನರೇ ಆಗಿದ್ದಾರೆ.

 ಒಂದೆಡೆ ನರೇಂದ್ರ ಮೋದಿಯವರು ‘ಬೇಟಿ ಬಚಾವೋ, ಪಡಾವೋ’ ಎಂದು ಸಾರ್ವಜನಿಕವಾಗಿ ಕರೆ ನೀಡುತ್ತಿದ್ದಾರೆ.ಇದರ ಜೊತೆ ಜೊತೆಗೆ ಯೋಗ ಮತ್ತು ಆಯುರ್ವೇದ ಶಿಕ್ಷಣವನ್ನು ಸಾರ್ವಜನಿಕವಾಗಿ ಅತಿ ವೈಭವೀಕರಣಗೊಳಿಸುತ್ತಿದ್ದಾರೆ.ಯೋಗವನ್ನು ಸಾರ್ವತ್ರಿಕಗೊಳಿಸುವ ಮಾತನ್ನಾಡುತ್ತಿದ್ದಾರೆ.ದುರಂತವೆಂದರೆ, ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಮೂವರು ತರುಣಿಯರು, ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು. ಈ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಈ ಮೂವರು ತರುಣಿಯರನ್ನು ಯಾವ ರೀತಿಯಲ್ಲಿ ಶೋಷಣೆಗೈಯುತ್ತಿತ್ತೆಂದರೆ, ಲಕ್ಷಾಂತರ ರೂ. ಶುಲ್ಕ ಕಟ್ಟಿದ್ದರೂ ಅದಕ್ಕೆ ಸ್ಪಷ್ಟವಾದ ರಸೀದಿಯನ್ನೇ ಕೊಡುತ್ತಿರಲಿಲ್ಲ.ಇಷ್ಟೆಲ್ಲ ದುಡ್ಡು ಕಟ್ಟಿದ ಬಳಿಕವೂ ಇನ್ನಷ್ಟು ಹಣವನ್ನು ಅಪೇಕ್ಷಿಸುತ್ತಿತ್ತು.ಆದರೆ ಶುಲ್ಕಕ್ಕೆ ಪೂರಕವಾದ ಯಾವುದೇ ಸವಲತ್ತುಗಳು ಕಾಲೇಜಿನಲ್ಲಿದ್ದಿರಲಿಲ್ಲ.ಇದನ್ನು ಪ್ರಶ್ನಿಸಿದರೆ, ಈ ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳವನ್ನು ನೀಡಲಾಗುತ್ತಿತ್ತು.ಈ ವಿದ್ಯಾರ್ಥಿನಿಯರಂತೂ ತೀರಾ ಬಡ ಕುಟುಂಬಗಳಿಂದ ಬಂದವರು.ಒಂದೆಡೆ ತಂದೆತಾಯಿಯರ ಹಣ ವ್ಯರ್ಥವಾಗಿ ಸೋರಿಹೋಗುತ್ತಿದೆ. ಹಾಗೆಯೇ ತಮಗೆ ನೀಡುತ್ತಿರುವ ಶಿಕ್ಷಣದ ಕುರಿತಂತೆ ಅವರಿಗೆ ಯಾವುದೇ ಭರವಸೆಯಿದ್ದಿರಲಿಲ್ಲ.ಆಡಳಿತ ಮಂಡಳಿಯ ಮೊರೆ ಹೊಕ್ಕರೂ ಇವರಿಗೆ ನ್ಯಾಯ ಸಿಗಲಿಲ್ಲ.ತೀರಾ ಹತಾಶೆಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಲ್ಲಿ ಅವರು ಪ್ರತಿಭಟನೆಯ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಎಷ್ಟು ಮುಖ್ಯವೋ, ಈ ಮಹಿಳೆಯರ ಆತ್ಮಹತ್ಯೆ ಪ್ರಕರಣವೂ ಅಷ್ಟೇ ಗಂಭೀರ ಸ್ವರೂಪದ್ದಾಗಿದೆ. ಮಹಿಳೆಯರು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡುತ್ತಿರುವುದೇ ಕಷ್ಟಸಾಧ್ಯವಾಗಿರುವ ಇಂದಿನ ದಿನಗಳಲ್ಲಿ, ಯೋಗ, ನ್ಯಾಚುರೋಪತಿಯ ಹೆಸರಿನಲ್ಲಿ ಈ ತರುಣಿಯರನ್ನು ಮೋಸ ಮಾಡಿ, ಅವರನ್ನು ಆತ್ಮಹತ್ಯೆಗೆ ತಳ್ಳಿದ ಕಾಲೇಜು ಆಡಳಿತ ಮಂಡಳಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ. ಆ ಕಾಲೇಜಿನ ವಿರುದ್ಧ ಗಂಭೀರ ತನಿಖೆ ನಡೆಸಿ ಅದನ್ನು ಶಾಶ್ವತವಾಗಿ ಮುಚ್ಚುವ ಅಗತ್ಯವಿದೆ. ಈಗಾಗಲೇ ಈ ಕಾಲೇಜಿನ ಪ್ರಾಂಶುಪಾಲ ವಾಸುಕಿ ಸುಬ್ರಹ್ಮಣ್ಯನ್ ಎನ್ನುವವನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ಪ್ರಕರಣದಲ್ಲಿ ಇವನೊಬ್ಬನೇ ಆರೋಪಿಯಲ್ಲ ಎನ್ನುವುದು ಗಮನಿಸಬೇಕಾಗಿದೆ. ಹಾಗೆಯೇ ಗಲ್ಲಿಗೊಂದರಂತೆ ತಲೆಯೆತ್ತುತ್ತಿರುವ ಇಂತಹ ಯೋಗ, ನ್ಯಾಚುರೋಪತಿ ಕಾಲೇಜುಗಳ ಸ್ಥಿತಿಗತಿಯನ್ನು ತನಿಖೆ ನಡೆಸಿ, ಅಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲಿಗೆಳೆಯುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ಈ ಮೂವರು ತರುಣಿಯರ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು, ರೋಹಿತ್ ವೇಮುಲಾ ಸಾವನ್ನು ಸಾಮಾನ್ಯೀಕರಿಸುವ ಮತ್ತು ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ತಡೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ.ಈ ವಿದ್ಯಾರ್ಥಿನಿಯರ ಆತ್ಮಹತ್ಯೆಗೆ ನೀವೇಕೆ ವೌನವಾಗಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ರೋಹಿತ್ ವೇಮುಲಾ ಪ್ರಕರಣದಷ್ಟೇ ಗಂಭೀರವಾದುದು ಈ ಮೂವರು ವಿದ್ಯಾರ್ಥಿನಿಯರ ಆತ್ಮಹತ್ಯೆ.ಇದರಲ್ಲಿ ಎರಡು ಮಾತಿಲ್ಲ. ರೋಹಿತ್ ವೇಮುಲಾ ಆತ್ಮಹತ್ಯೆಯ ಹಿಂದೆ ಜಾತೀಯವಾದಿಗಳ ಒಳ ಸಂಚುಗಳಿವೆ.ಅಂತೆಯೇ ಈ ಮೂವರು ವಿದ್ಯಾರ್ಥಿನಿಯರು ದಲಿತರಲ್ಲದಿರಬಹುದು, ಆದರೆ ಇವರು ಮಹಿಳೆಯರು.ಈ ದೇಶದಲ್ಲಿ ಮಹಿಳೆಯ ಸ್ಥಿತಿಗತಿ ದಲಿತರ ಸ್ಥಿತಿಗತಿಗಿಂತ ಭಿನ್ನವಾಗಿಯೇನೂ ಇಲ್ಲ.ಜೊತೆಗೆ ಇವರು ಬಡ ಕುಟುಂಬದಿಂದ ಬಂದ ವಿದ್ಯಾರ್ಥಿನಿಯರು. ಹೇಗೆ ವೇಮುಲಾ ಪರವಾಗಿ ಪ್ರತಿಭಟನೆ ನಡೆಯಬೇಕೋ ಹಾಗೆಯೇ ಈ ವಿದ್ಯಾರ್ಥಿನಿಯರ ಸಮಸ್ಯೆಗಳೂ ಚರ್ಚೆಗೊಳಗಾಗಬೇಕು.ಅಪರಾಧಿಗಳಿಗೆ ಶಿಕ್ಷೆಯಾಗಬೇಕು.ಈ ವಿದ್ಯಾರ್ಥಿನಿಯರ ವಿರುದ್ಧ ಯಾಕೆ ಯಾರೂ ಪ್ರತಿಭಟಿಸುತ್ತಿಲ್ಲ ಎಂದು ಕೇಳುವ ಎಬಿವಿಪಿಯ ಕಾರ್ಯಕರ್ತರು ತಾವೇ ಯಾಕೆ ಇವರ ಪರವಾಗಿ ಪ್ರತಿಭಟನೆಗೆ ಇಳಿಯಬಾರದು?ಕನಿಷ್ಠ ಇವರು ಹಿಂದೂ ಧರ್ಮದ ವಿದ್ಯಾರ್ಥಿನಿಯರು ಎಂಬ ನೆಲೆಯಲ್ಲಾದರೂ ಸಂಘಪರಿವಾರ ಈ ವಿದ್ಯಾರ್ಥಿನಿಯರ ಪರವಾಗಿ ಬೀದಿಗಿಳಿಯಬಹುದಲ್ಲ?ಯಾಕೆ ವೌನವಾಗಿದೆ? ತೀರ್ಥಹಳ್ಳಿಯಲ್ಲಿ ನಂದಿತಾ ಪ್ರಕರಣಕ್ಕೆ ಸಂಬಂಧಪಟ್ಟು ಬೀದಿಗಿಳಿದು ಅಮಾಯಕರ ಅಂಗಡಿ, ಮನೆಗಳಿಗೆ ಬೆಂಕಿ ಹಚ್ಚುವವರು, ಎಲ್ಲೋ ಮೀರತ್‌ನಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಇನ್ನೆಲ್ಲೋ ಅಲ್ಪಸಂಖ್ಯಾತರ ಮನೆಗಳಿಗೆ ದಾಳಿ ನಡೆಸುವವರು ಈ ಮೂವರು ವಿದ್ಯಾರ್ಥಿನಿಯರ ಸಾವಿನ ಕುರಿತಂತೆ ಯಾಕೆ ನಿಗೂಢ ವೌನವನ್ನು ತಾಳಿದ್ದಾರೆ. ಎಬಿವಿಪಿಗೂ ಈ ಕಾಲೇಜಿನ ಆಡಳಿತ ಮಂಡಳಿಗೂ ಇರುವ ಸಂಬಂಧವಾದರೂ ಏನು?ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿದೆ. ಈ ಮೂವರು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಲು ಎಬಿವಿಪಿಯಂತಹ ಸಂಘಟನೆಗಳಿಗೆ ಹೆಚ್ಚು ಅವಕಾಶವಿದೆ. ಆದರೂ ಇವರು ಈ ವಿದ್ಯಾರ್ಥಿನಿಯರ ಪರವಾಗಿ ಪ್ರತಿಭಟಿಸುತ್ತಿಲ್ಲ ಯಾಕೆ?ಹಾಗಾದರೆ ಎಬಿವಿಪಿ ಎನ್ನುವ ವಿದ್ಯಾರ್ಥಿ ಸಂಘಟನೆ ಅಸ್ತಿತ್ವದಲ್ಲಿರುವುದರ ಉದ್ದೇಶವೇನು? ವಿದ್ಯಾರ್ಥಿಗಳ ನಡುವೆ ಜಾತಿ, ಧರ್ಮಗಳ ವಿಷ ಬೀಜವನ್ನು ಬಿತ್ತಿ ಅವರನ್ನು ಒಡೆಯುವುದು, ರೋಹಿತ್ ವೇಮುಲಾರಂತಹ ದಲಿತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿ ಅವರನ್ನು ಆತ್ಮಹತ್ಯೆಯಂತಹ ಕೃತ್ಯದೆಡೆಗೆ ತಳ್ಳುವುದಕ್ಕಾಗಿ ಈ ಸಂಘಟನೆ ಅಸ್ತಿತ್ವದಲ್ಲಿದೆಯೇ?ಆತ್ಮಹತ್ಯೆಗೆ ಒಳಗಾಗಿರುವ ಮೂವರು ತರುಣಿಯರು ಯಾವ ಜಾತಿಗೇ ಸೇರಿರಲಿ, ಅವರಿಗೆ ನ್ಯಾಯ ಸಿಗಲೇಬೇಕು.ಅದಕ್ಕಾಗಿ ಎಲ್ಲಾ ಜಾತಿ, ಧರ್ಮದ ಜನರು ಒಂದಾಗಿ ಧ್ವನಿ ಎತ್ತಬೇಕು. ರೋಹಿತ್ ವೇಮುಲಾರ ಪರವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ತಣ್ಣಗಾಗಿಸಲು ಈ ತರುಣಿಯರ ಆತ್ಮಹತ್ಯೆಯ ಕಡೆಗೆ ತೋರು ಬೆರಳು ತೋರಿಸುವ ಜನರ, ಉಳಿದ ಮೂರು ಬೆರಳು ಅವರ ಕಡೆಗೇ ಚಾಚಿವೆ ಎನ್ನುವುದನ್ನು ಮರೆಯಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X