Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜಾತಿಯೆಂಬ ಕಗ್ಗತ್ತಲ ಕೂಪದೊಳಗೆ...

ಜಾತಿಯೆಂಬ ಕಗ್ಗತ್ತಲ ಕೂಪದೊಳಗೆ...

ವಿ. ಬಾಲಕೃಷ್ಣ, ಮಾಲೂರುವಿ. ಬಾಲಕೃಷ್ಣ, ಮಾಲೂರು26 Jan 2016 11:45 PM IST
share

ಭಾರತದ ಶ್ರೇಣೀಕರಣ ವ್ಯವಸ್ಥೆಯು ಮೇಲ್ಮುಖ ಚಲನೆಯಿಂದ ಕೆಳಮುಖವಾದ ಜಾತಿ ವ್ಯವಸ್ಥೆ ಕಟ್ಟಳೆ ರೂಪಿಸಿ ಸಮಾಜದ ಅತ್ಯುನ್ನತ ಸ್ಥಾನಕ್ಕೆ ನಮ್ಮ ಆಚರಣೆಗಳೇ ಮಾದರಿಯೆಂದು ಬಿಂಬಿಸಿ ಬಹುಸಂಖ್ಯಾತ ಜನರನ್ನು ಕಾರ್ಗತ್ತಲ ಕೂಪದಲ್ಲಿ ಕೂರಿಸಿದ್ದಾರೆ. ಇಂತಹ ಚರಿತ್ರೆಯನ್ನರಿಯದ ತಳ ಸಮುದಾಯದವರು ಅಂಬೇಡ್ಕರ್‌ರವರ ಹೋರಾಟ ಫಲದಿಂದ ಅಲ್ಪಆರ್ಥಿಕ ಸುಸ್ಥಿತಿಯನ್ನು ಪಡೆದು ಈ ಅಲ್ಪತೃಪ್ತಿಯೇ ಅಂತಿಮವೆಂದು ಬಗೆದು ಕೆಳ ಜಾತಿಯ ಜೀವನ ಕ್ರಮ, ಆಹಾರ ಪದ್ಧ್ದತಿಯಿಂದ ವಿಮುಕ್ತರಾಗಿ ದ್ವಿಜರ ಜೀವನ ಕ್ರಮ, ಆಹಾರ ಪದ್ಧತಿಗಳನ್ನು ‘ಮಾದರಿ’ ಎಂದು ಪರಿಗಣಿಸಿ ಈ ಜೀವನ ಕ್ರಮದಿಂದ ಜಾತಿಯ ಮೇಲ್ಮುಖ ಚಲನೆಗೆ ಹಾತೊರೆಯುತ್ತಿರು ವವರ ಭ್ರಮೆಯನ್ನು ಕಂಡು ಕನಿಕರ ಪಡಬೇಕಾಗಿದೆ.

ಒಂದೊಮ್ಮೆ ಜಾತಿ ರಕ್ಕಸನ ವಿರುದ್ಧ ಬಂಡೆದ್ದವರು ಜಾತಿ ಉಪಜಾತಿಗಳಾಗಿ ಛಿದ್ರವಾಗುತ್ತಿದ್ದಾರೆ.ಈ ಜಾತಿ ಹಿಂದೆಂದಿಗಿಂತಲೂ ಇಂದು ರೂಪಾಂತರ ಪಡೆದು ಪೆಡಂಬೂತವಾಗಿ ಆವರಿಸುತ್ತಿರುವುದು ಹೇಗೆ? ನಮ್ಮ ಮಾನಸಿಕ ಸಂರಚನೆಗಳಲ್ಲಿ ತೊಡಕಿದಿಯಾ ?ನಾವು ಪಡೆದ ಶಿಕ್ಷಣ ಪದ್ಧ್ದತಿಯಲ್ಲಿ ದೋಷವಿದೆಯಾ?ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾ ನಮ್ಮನ್ನು ಆತಂಕಕ್ಕೆ ತಳ್ಳುತ್ತದೆ.

ಡಾ॥

ಪರಂಪರಾಗತವಾಗಿ ಜಾತಿ ವ್ಯವಸ್ಥೆಯನ್ನು ಗಟ್ಟಿಮಾಡಿಕೊಂಡು ಬಂದಿರುವ ಬ್ರಾಹ್ಮಣ ಶಾಹಿಗಳು ಸ್ವಜಾತಿ ಪದ್ಧ್ದತಿ ಕಟ್ಟಳೆಯನ್ನು ಶಿರಸಾವಹಿಸಿ ಪಾಲಿಸಲು ಎಂತಹ ನೀಚ ಕೃತ್ಯಕ್ಕಾದರೂ ಹೇಸದಿರುವುದು ಅವರ ತಂತ್ರಗಳಿಂದ ತಿಳಿಯಬಹುದಾಗಿದೆ.

ಹಿಂದೂ ಸಮಾಜದಲ್ಲಿನ ನೀಚ ಪದ್ಧತಿಗಳಾದ ಸತಿ ಪದ್ದತಿ, ವಿಧವಾ ಪದ್ದತಿ, ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗುಗಳನ್ನು ಹೇರುವ ದುಸ್ಸಾಹಸ ಕ್ರಮದ ಬಗ್ಗೆ ಅಂಬೇಡ್ಕರ್ ತಮ್ಮ ಪ್ರಬಂಧದಲ್ಲಿ ವಿಶ್ಲೇಷಣಾತ್ಮಕವಾಗಿ ವಿವರಿಸುತ್ತಾರೆ.

ಹೆಂಡತಿ ಸತ್ತವನು ತನ್ನ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬೇರೆ ಜಾತಿಯ ಹೆಣ್ಣನ್ನು ಕೂಡುವು ದನ್ನು ತಪ್ಪಿಸಲು ಬ್ರಹ್ಮಚರ್ಯ ಸ್ವೀಕರಿಸುವುದು. ಸಾಧ್ಯವಿಲ್ಲವೆಂದರೆ ಅವನು ಕುಟುಂಬದ ಮುಖ್ಯಸ್ಥ ನಾಗಿ ಸ್ವಜಾತಿ ಪದ್ಧ್ದತಿ ಪಾಲಿಸುವ ಹೊಣೆಗಾರಿಕೆ ಇರುವುದರಿಂದ (ಬಹುಶಃ ಪುರುಷ ಪ್ರಧಾನ ಸಮಾಜ ಪೋಷಿಸುವುದರಿಂದ) ಅಪ್ರಾಪ್ತ ವಯಸ್ಕಳೊಂದಿಗೆ ವಿವಾಹ ಮಾಡುವುದರ ಮೂಲಕ ಬಾಲ್ಯ ವಿವಾಹ ಆಚರಣೆ ತಂದಿರಬಹುದೆಂಬ ಶಂಕೆಯನ್ನು ಅಂಬೇಡ್ಕರ್ ವ್ಯಕ್ತಪಡಿಸುತ್ತಾರೆ.ಆದರೆ ಗಂಡನನ್ನು ಕಳಕಂಡ ಹೆಣ್ಣಿಗೆ ಕಡ್ಡಾಯ ವೈಧವ್ಯ ಪದ್ಧ್ದತಿ ಹೇರುವುದು, ಕಾಲಾನುಕ್ರಮದಲ್ಲಿ ಗಂಡನ ಚಿತೆಗೆ ಒತ್ತಾಯ ಪೂರಕವಾಗಿ ದೂಡುವ ನೀಚ ಕೆಲಸವನ್ನು ಎಗ್ಗಿಲ್ಲದಂತೆ ಮಾಡಿ ಇದನ್ನು ಹೆಣ್ಣು ಸ್ವಯಂಪ್ರೇರಿತಳಾಗಿ ಬೀಳುವುದೆಂದು ಹುಸಿ ಪತಿವ್ರತೆ ಕಟ್ಟುಕತೆಯನ್ನು ಬಿಂಬಿಸಿರುವ ಸಂಗತಿಗಳು ಚರಿತ್ರೆಯಿಂದ ತಿಳಿದಿದೆ.

ಇಂತಹ ಜಾತೀಯ ಅಂಟುಜಾತಿಗಳನ್ನು ಕಾಲಾನುಕ್ರಮದಲ್ಲಿ ಆಯಾ ಕಾಲಘಟ್ಟದಲ್ಲಿ ವೈದಿಕರು ಸಂರಕ್ಷಿಸುತ್ತಾ ಬಂದಿರುವುದು ‘ಬ್ರಾಹ್ಮಣ್ಯ’ಕ್ಕೆ ಒಳಪಟ್ಟಿರುವವರಿಗೆ ತಿಳಿಯದೇ ಇರುವುದು ಸೋಜಿಗವಾಗಿದೆ. ಬಲಪಂಥೀಯ ಸಂಘಟನೆಗಳು ವಿಸ್ತಾರವಾಗಿ ಬೆಳೆಯುತ್ತಿರುವ ಇಂತಹ ಸಂದರ್ಭದಲ್ಲಿ ದಲಿತರು ಜಾತಿ ಉಪಜಾತಿಗಳಾಗಿ ವಿಘಟನೆಗೊಳ್ಳುತ್ತಿರುವುದು ನಮ್ಮೆಲ್ಲರ ದುರಂತ.

share
ವಿ. ಬಾಲಕೃಷ್ಣ, ಮಾಲೂರು
ವಿ. ಬಾಲಕೃಷ್ಣ, ಮಾಲೂರು
Next Story
X