ದುಬೈ: ತುಂಬೆ ಫಾರ್ಮಸಿ ಉದ್ಘಾಟನೆ ದುಬೈ

(ರಾಸ್ ಅಲ್ ಖೈಮಾ), ಜ.26: ತುಂಬೆ ಸಮೂಹ ಸಂಸ್ಥೆಯ ಹೆಲ್ತ್ ಕೇರ್ ವಿಭಾಗದ ವತಿಯಿಂದ ರಾಸ್ ಅಲ್ ಖೈಮಾದಲ್ಲಿ ಸ್ಟೇಟ್ -ಆಫ್-ದಿ-ಆರ್ಟ್ ತುಂಬೆ ಕ್ಲಿನಿಕ್ ಹಾಗೂ ಫಾರ್ಮಸಿಯನ್ನು ರಾಸ್ ಅಲ್ ಖೈಮಾ ಫ್ರೀ ಟ್ರೇಡ್‌ನ ರೆನ್‌ನ ಅಧ್ಯಕ್ಷ ಶೇಖ್ ಅಹ್ಮದ್ ಬಿನ್ ಸಖ್ವಾರ್ ಅಲ್ ಖಾಸಿಮ್ ಉದ್ಘಾಟಿಸಿದರು. ತುಂಬೆ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ ಉಪಸ್ಥಿತರಿದ್ದರು. ನೂತನ ಕ್ಲಿನಿಕ್ ಆಧುನಿಕ ಲ್ಯಾಬೋರೇಟರಿ, ವಿವಿಧ ವೈದ್ಯಕೀಯ ತಪಾಸಣಾ ಹಾಗೂ ಚಿಕಿತ್ಸಾ ವಿಭಾಗಗಳನ್ನು ಹೊಂದಿದೆ ಎಂದು ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ತಿಳಿಸಿದರು.
Next Story





