ಒಮನ್: ಫನ್‌ಟೈಮ್ ಸ್ಪೋರ್ಟ್ಸ್ ಮೀಟ್

ಒಮನ್, ಜ.26: ಇಂಡಿಯನ್ ಪ್ರವಾಸಿ ಫೋರಂ ಸಲಾಲ-ಒಮನ್ ವತಿಯಿಂದ ಭಾರತೀಯ ಕುಟುಂಬಗಳ ಸಮ್ಮಿಲನ ‘ಫನ್ ಟೈಮ್ ಸ್ಪೋರ್ಟ್ಸ್ ಮೀಟ್ ಅಸ್ಸಾಧ ಪಬ್ಲಿಕ್ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ನಿರ್ದೇಶಕ ಶಮೀರ್ ಪುತ್ತೂರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಸುಹಾಝ್ ಅಳಕೆಮಜಲ್ ಸಮಾರೋಪ ಭಾಷಣ ಮಾಡಿದರು. ಫೈರೋಝ್ ಕಲ್ಲಡ್ಕ, ಫಾರೂಕ್ ಕನ್ನಂಗಾರ್, ನಾಸಿರ್ ನಂದಾವರ, ಮುಹಮ್ಮದ್ ಅಲಿ ಬಂಟ್ವಾಳ್, ಆಬಿದ್ ನಂದಾವರ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದರು.
Next Story





