ಮುಲ್ಕಿ: ಯತೀಂ ಖಾನಾ ಕಟ್ಟಡಕ್ಕೆ ಶಿಲಾನ್ಯಾಸ
ಮುಲ್ಕಿ, ಜ. 26: ಮುಲ್ಕಿ ಶಾಫಿ ಜುಮಾ ಮಸೀದಿಯ ಆಶ್ರಯದಲ್ಲಿ ನೂತನ ವಸತಿ ಸಮುಚ್ಚಯ, ಹಿಫ್ಲುಲ್ ಕುರ್‌ಆನ್, ಯತೀಂಖಾನಾ ಕಟ್ಟಡಕ್ಕೆ ಕಾರ್ನಾಡ್ ಮಸ್ಜಿದುನ್ನೂರ್ ಮಸೀದಿಯ ಬಳಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಶಿಲಾನ್ಯಾಸಗೈದರು.
ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿ ದುಆ ಆಶೀರ್ವಚನಗೈದರು. ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಸಂಚಾಲಕ ಹುಸೈನ್ ದಾರಿಮಿ ರೆಂಜಲಾಡಿ ಮುಖ್ಯ ಭಾಷಣ ಮಾಡಿದರು. ಮುಲ್ಕಿಯ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಮುಲ್ಕಿ ಅಧ್ಯಕ್ಷತೆ ವಹಿಸಿದ್ದರು.ಮುಲ್ಕಿ ಶಾಫಿ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಇಬ್ರಾಹೀಂ ದಾರಿಮಿ, ಲಿಯಾಕತ್ ಅಲಿ, ಹಾಜಿ ವೈ. ಮುಹಮ್ಮದ್ ಕುಂಞಿ, ಹಾಜಿ ಸೈಯದ್ ಕರ್ನಿರೆ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಇನಾಯತ್ ಅಲಿ ಮುಲ್ಕಿ, ಮುಹಮ್ಮದ್ ಆಸೀಫ್, ರಿಝ್‌ಬಾವಾ, ಹನೀಫ್ ಕೊಳಚೆ ಕಂಬ್ಳ, ಅಬ್ದುಲ್ ಹಕೀಮ್ ಅಶ್ರಫ್, ಕೆ.ಎಂ. ಬಾವಾ ಕೋಡಿಕೆರೆ, ನಾಲೂರು ಬಾವುಞ್ಞೆ ಮತ್ತಿತರರು ಉಪಸ್ಥಿತರಿದ್ದರು.





