ಧರ್ಮಸ್ಥಳ: ಸ್ವಚ್ಛತಾ ಅಭಿಯಾನ ಜಾಥಾಕ್ಕೆ ಚಾಲನೆ

ಬೆಳ್ತಂಗಡಿ, ಜ.26: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು, ಧರ್ಮಸ್ಥಳ ಗ್ರಾಪಂ, ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ, ಕನ್ಯಾಕುಮಾರಿ ಯುವತಿ ಮಂಡಲ ಧರ್ಮಸ್ಥಳ, ಜ್ಞಾನ ವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಧರ್ಮಸ್ಥಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಾಗರಿಕ ಪ್ರಜ್ಞಾ ಕಾರ್ಯಕ್ರಮದಡಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಎದುರುಗಡೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಅಚ್ಚುತ ಪೂಜಾರಿ, ಉಪಾಧ್ಯಕ್ಷೆ ಜಯಂತಿ, ಸದಸ್ಯರಾದ ಟಿ.ವಿ. ದೇವಸ್ಯ, ಪ್ರಭಾಕರ ಪೂಜಾರಿ, ಶ್ರೀನಿವಾಸ ರಾವ್, ರೀನಾ ಶಿಬಿ, ಹೊನ್ನಮ್ಮ, ಯೋಜನೆಯ ಮೇಲ್ವಿಚಾರಕ ಮಾಧವ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಕೇಶವ ಗೌಡ ಪಿ. ಸ್ವಾಗತಿಸಿದರು. ಗ್ರಾಪಂ ಪಿಡಿಒ ರತ್ನರಾಜ ಹೆಗ್ಡೆ ವಂದಿಸಿದರು.
Next Story





