ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ತಲಪಾಡಿ : ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಹಾಜೀ ಅಬ್ಬಾಸ್ ಮಜಲ್ ಧ್ವಜಾರೋಹಣಗೈದರು. ಕಾರ್ಯಕ್ರಮಕ್ಕೆ ಮುನ್ನ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಯು.ಬಿ.ಮೊಹಮ್ಮದ್ ಹಾಜಿ, ಕಾರ್ಯದರ್ಶಿ ಹಾಜಿ.ಎನ್.ಅರಬಿ ಕುಂಞ, ಕೋಶಾಧಿಕಾರಿ ಹಾಜಿ. ಇಸ್ಮಾಯಿಲ್ ನಾಗತೋಟ, ಸದಸ್ಯರಾದ ಡಾ ಅಬ್ದುಲ್ ಖಾದರ್, ಅಹಮ್ಮದ್ ಬಾವ, ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಹುಸ್ಸೈನ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ.ಎಂ , ಕನ್ನಡ ಮಾಧ್ಯಮ ಶಾಲಾ ಮುಖ್ಯಶಿಕ್ಷಕರಾದ ಮಹಮ್ಮದ್ ರಫೀಕ್ .ಕೆ ಮತ್ತಿತ್ತರರು ಉಪಸ್ಥಿತರಿದ್ದರು.
Next Story





