ಟಾಪ್ ಹತ್ತು ಶ್ರೀಮಂತರ ಲಿಸ್ಟ್ ನಲ್ಲಿ ಬಿಲ್ ಗೇಟ್ಸ್ ಮತ್ತೆ ಮೊದಲ ಸ್ಥಾನಕ್ಕೆ
.jpg)
ಹೊಸದಿಲ್ಲಿ: ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಮತ್ತೆ ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವೆಲ್ತ್-ಎಕ್ಸ್ ನ ಹೊಸ ಪಟ್ಟಿಯಲ್ಲಿ ಅವರ ನೆಟ್‌ವರ್ಥ್87.4 ಬಿಲಿಯನ್‌ಡಾಲರ್ ಅಂದರೆ ಸುಮಾರು5.9ಲಕ್ಷ ಕೋಟಿರೂಪಾಯಿ ಆಗಿದೆ. ಪಟ್ಟಿಯಲ್ಲಿ ಇಂಡಿಟೆಕ್ಸ್ ಫ್ಯಾಶನ್ ಗ್ರೂಪ್‌ನ ಅಮಾಚಿವೋ ವೋರ್ಟಗಾದ ಪ್ರಮುಖ 4.5ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಎರಡನೆ ಸ್ಥಾನದಲ್ಲಿದ್ದಾರೆ. ವಾರೆನ್ ಬಫೆಟ್ 4.1 ಲಕ್ಷ ಕೋಟಿ ರೂ.ಸಂಪತ್ತಿನೊಂದಿಗೆ ಮೂರನೆ ಸ್ಥಾನದಲ್ಲಿದ್ದಾರೆ. ಅಮೆಝಾನ್‌ನ ಮುಖ್ಯಸ್ಥ ಜೆಪ್‌ಬೆಜಾನ್ 3.8 ಕೋಟಿರೂ.
ಸಂಪತ್ತಿನೊಂದಿಗೆ 4ನೆ ಸ್ಥಾನದಲ್ಲಿದ್ದಾರೆ. 3.2 ಲಕ್ಷ ಕೋಟಿರೂ. ಸಂಪತ್ತು ಹೊಂದಿರುವ ಕೋಚ್ ಇಂಡಸ್ಟ್ರೀಸ್‌ನ ಚಾರ್ಲ್ಸ್ ಕೋಚ್ ಐದನೆ ಸ್ಥಾನದಲ್ಲಿದ್ದಾರೆ. ಎಂಟನೆ ಸ್ಥಾನದಲ್ಲಿ ಫೇಸ್‌ಬುಕ್ ಮಾಲಿಕ ಝುಕರ್‌ಬರ್ಗ್ ಇದ್ದಾರೆ. ಅವರು 2.9 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ.
Next Story





