ಸುಳ್ಯ : ಹೊಳೆಗೆ ಬಿದ್ದ ಕಾರು

ಸುಳ್ಯ: ಸರ್ವಿಸ್ ಮಾಡಲು ತಂದಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಘಟನೆ ನಡೆದಿದೆ.
ಸುಳ್ಯದ ಹಳೆಗೇಟು ಸರ್ವಿಸ್ ಸ್ಟೇಷನ್‌ಗೆ ಎಲಿಮಲೆಯ ಹಸೈನಾರ್ ಎಂಬವರು ಓಮ್ನಿ ಕಾರನ್ನು ಸರ್ವಿಸ್ ಮಾಡಲು ತಂದಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಆವರಣ ಗೋಡೆಗೆ ಡಿಕ್ಕಿ ಹೊಡೆದು ಎದುರಿನಲ್ಲಿದ್ದ ಹೊಳೆಗೆ ಬಿತ್ತು. ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದು, ಅವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು.
Next Story





