ಮೀರತ್ : ಕೆಲಸ ಕೊಡಿಸುವ ಆಮಿಶವೊಡ್ಡಿ ಕ್ರಿಡಾ ತರಬೇತಿ ಪಡೆಯುತ್ತಿದ್ದ ಯುವತಿಯ ಅತ್ಯಾಚಾರ

ಮೀರತ್: ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದ ಆಟಗಾರ್ತಿಯೊಬ್ಬಳನ್ನು ಅತ್ಯಾಚಾರವೆಸಗಿ ಥಳಿಸಿದ ಘಟನೆಯೊಂದು ಇಲ್ಲಿಂದ ವರದಿಯಾಗಿದೆ. ಹರಿದ್ವಾರದ ಹೊಟೇಲೊಂದರಲ್ಲಿ ಹತ್ತು ದಿವಸಗಳವರೆಗೆ ಅವಳನ್ನು ಕೂಡಿ ಹಾಕಿ ಅತ್ಯಾಚಾರವೆಸಗಲಾಯಿತು. ಮತ್ತು ಅವಳಿಗೆ ಕೆಲಸ ಕೊಡಿಸುವ ಆಮಿಷ ತೋರಿಸಿ ಅಲ್ಲಿಗೆ ಕರೆಸಲಾಗಿತ್ತು ಜೊತೆಗೆ ನೌಕರಿ ಕೊಡಿಸಲು ಲಂಚ ನೀಡಲಿಕ್ಕಾಗಿ ಹತ್ತು ಲಕ್ಷ ರೂಪಾಯಿ ವಸೂಲಿ ಮಾಡಲಾಯಿತೆಂದು ಆರೋಪ ಹೊರಿಸಲಾಗಿದೆ. ಅತ್ಯಾಚಾರಕ್ಕೊಳಗಾಗದ ಯುವತಿ ಚೌಧರಿ ಚರಣ್ ಸಿಂಗ್ ಯುನಿವರ್ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಳು ಎನ್ನಲಾಗಿದೆ. ಯುನಿವರ್ಸಿಟಿಯ ಹಳೆ ವಿದ್ಯಾರ್ಥಿ ಸೋನು ಗುರ್ಜರ್ ಎಂಬಾತನೊಂದಿಗೆ ಅವಳ ಭೇಟಿಯಾಗಿ ಇಬ್ಬರಲ್ಲಿ ಆತ್ಮೀಯ ಗೆಳತನ ಏರ್ಪಟ್ಟಿತು. ಅವನು ಕೆಲಸಕೊಡಿಸುವುದಾಗಿ ಅವಳನ್ನು ನಂಬಿಸಿದ್ದ. ನಂತರ ಲಂಚ ನೀಡಲಿಕ್ಕಾಗಿ ಹತ್ತು ಲಕ್ಷ ನಗದು ಹಣವನ್ನು ಕೇಳಿದ. ಈ ಕಾರಣದಿಂದ ಅವರಿಬ್ಬರಲ್ಲಿ ವಿವಾದ ಉಂಟಾಗಿತ್ತು.
ಸೋನು ಗುರ್ಜರ್ ಅತ್ಯಾಚಾರ ವೆಸಗಿದ್ದಳಲ್ಲದೆ ತನ್ನ ಬಾವ, ಗೆಳೆಯ ಪರ್ವೇರ್ ಎಂಬವರ ಜೊತೆಗೂಡಿ ಬೆಲ್ಟ್‌ನಿಂದ ಹೊಡೆದಿದ್ದಾನೆ ಹಾಗೂ ಕೊಂದು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯ ಕಡೆಯ ಕೆಲವರು ದೂರನ್ನು ವಾಪಸು ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ. ದೂರು ದಾಖಲಿಸಿರುವ ಮೀರತ್ ಮೆಡಿಕಲ್ ಠಾಣೆ ಪೊಲೀಸರು ಐವರ ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.





