ಎರಡನೆಯ ಮಂಡಲ್ ಕ್ರಾಂತಿಗೆ ಪಾಪ್ಯುಲರ್ ಫ್ರಂಟ್ ಕರೆ

ಕ್ಯಾಲಿಕಟ್, ಜ.27: ಎಲ್ಲ ಜಾತಿ ಮತ್ತು ಸಮುದಾಯಗಳಿಗೆ ತಮ್ಮ ಜನಸಂಖ್ಯೆಯಾ ಧಾರಿತ ಪ್ರಾತಿನಿಧ್ಯಕ್ಕಾಗಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೋಟಾ ಮೀಸಲಾತಿ ವ್ಯವಸ್ಥೆಯನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಭೆಯು ಒತ್ತಾಯಿಸಿದೆ. ಜನವರಿ 22ರಿಂದ 24ರ ವರೆಗೆ ಕೇರಳದ ಮಲಪ್ಪುರಂ ಜಿಲ್ಲೆಯ ಮಲಬಾರ್ ಹೌಸ್‌ನಲ್ಲಿ ನಡೆದ ಆಂತರಿಕ ಬಲ ನೀಡುವ ಮತ್ತು ಮೌಲ್ಯಮಾಪನ ಮಾಡುವ ರಾಷ್ಟ್ರೀಯ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು.
ಸಭೆಯು ಸಮಕಾಲೀನ ವಿಷಯಗಳಾದ ಸಮಾನ ಅವಕಾಶ ಆಯೋಗ ಮಸೂದೆ, ಬಾಬರಿ ಮಸೀದಿಯ ಪುನರ್‌ನಿರ್ಮಾಣ, ಆರೆಸ್ಸೆಸ್ ಭಾಗವಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರೀಯ ಮಂಚ್, ಎಎಂಯು ಮತ್ತು ಜೆಎಂಐ ವಿಶ್ವವಿದ್ಯಾಲಯಗಳ ಅಲ್ಪಸಂಖ್ಯಾತ ಮಾನ್ಯತೆಯನ್ನು ಉಳಿಸುವುದು, ಡಿಎನ್‌ಎ ಪರಿಚಯದ ಮಸೂದೆಯನ್ನು ಹಿಂಪಡೆಯುವುದು, ಯುಎಪಿಎಯನ್ನು ರದ್ದುಗೊಳಿಸುವುದು, ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಹಾಗೂ ಅರಬ್ ಮುಸ್ಲಿಂ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂಸೆ ಮತ್ತು ಬಿಕ್ಕಟ್ಟು ಮುಂತಾದವುಗಳ ಮೇಲೆ ನಿರ್ಣಯ ಕೈಗೊಳ್ಳಲಾಯಿತು.
ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಗಾಮಿ ಶಕ್ತಿಗಳು ಮೀಸಲಾತಿಯ ಪರಿಕಲ್ಪನೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು ರಾಷ್ಟ್ರೀಯ ಸಭೆಯು ಗಮನಿಸಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿಯನ್ನು ಪುನರ್ ವಿಮರ್ಶೆಗೆ ಬಹಿರಂಗ ಕರೆ ನೀಡುವುದು ಮೀಲಾತಿಯನ್ನು ಹಾಳುಮಾಡುವ ಜಾಣ ಪ್ರಯತ್ನವಾಗಿದೆ. ಅದೇ ರೀತಿ ಅತೀ ಹಿಂದುಳಿದ ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಲು ಆಗ್ರಹಿಸುವುದು ಸಮುದಾಯವನ್ನು ವಿಭಜಿಸುವ ಬಹುಸಂಖ್ಯಾತ ಕೋಮುವಾದಿ ರಾಜಕಾರಣದ ಭಾಗವಾಗಿದೆ. ಮಂಡಲ್ ಆಯೋಗ ವರದಿಯ 25 ವರ್ಷಾಚರಣೆಯ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯದಡಿಯಲ್ಲಿ ಪರಿಹಾರಕ್ಕಾಗಿ ದೇಶದಾದ್ಯಂತ ನಡೆಯುವ ಆಂದೋಲನದಲ್ಲಿ ಎಲ್ಲಾ ಹಿಂದುಳಿದ ವರ್ಗಗಳೂ ಕೈ ಜೋಡಿಸಬೇಕೆಂದು ರಾಷ್ಟ್ರೀಯ ಸಭೆ ಕರೆ ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಹಕ್ಕುಗಳಲ್ಲಿ ಆರೆಸ್ಸೆಸ್ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಹಸ್ತಕ್ಷೇಪವು ಅದರ ಕಾರ್ಯಚಟುವಟಿಕೆಗಳ ವ್ಯಾಪ್ತಿಯು ವ್ತಿರಿಸಿದೆ ಎಂಬುದರ ಸಂಕೇತವಾಗಿದೆ. ರಾಷ್ಟ್ರೀಯ ಮಂಚ್ ಎಂಬ ಆರೆಸ್ಸೆಸ್ ಘಟಕವು, ಈಗಾಗಲೆ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ರೂವಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತನಿಖಾ ಸಂಸ್ಥೆಗಳು ಕಂಡುಕೊಂಡಿರುವ ಆರೆಸ್ಸೆಸ್ ರಾಷ್ಟ್ರೀಯ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್ ನೇತತ್ವದಲ್ಲಿ ನಡೆಯುತ್ತಿರುವ ಸಂಘಟನೆಯಾಗಿದೆ ಎಂದು ಸಭೆಯು ಜನರನ್ನು ಎಚ್ಚರಿಸಿದೆ. ಈ ಸಮುದಾಯಗಳ ಸೂಕ್ತ ಉದ್ದೇಶ, ಅವರ ಮೇಲೆ ತಮ್ಮ ಅಜೆಂಡಾಗಳನ್ನು ಹೇರಲು ಮತ್ತು ಅಸಷ್ಣುತೆ ಹಾಗೂ ಅಲ್ಪಸಂಖ್ಯಾತ ವಿೋಧಿ ನೀತಿಗಳನ್ನು ಮರೆ ಮಾಚಲು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಂಚ್‌ನಂತಹ ಹೊಸ ಸಂಘಟನೆಗಳನ್ನು ಬಳಸಿಕೊಂಡು ಆರೆಸ್ಸೆಸ್ ಸಾಗುತ್ತಿದೆ. ಎಲ್ಲಾ ಪ್ರಾಮಾಣಿಕ ಮುಸ್ಲಿಂ ಸಂಘಟನೆ ಮತ್ತು ನಾಯಕರನ್ನು ಈ ಕುತಂತ್ರಗಳ ಬಗ್ಗೆ ಎಚ್ಚರಿಕೆಯಿಂದಿರಲು ಸಭೆಯು ಕರೆ ನೀಡಿದೆ.
ಸಭೆಯು ಚೆಯರ್ ಮ್ಯಾನ್ ಕೆ.ಎಂ.ಶರೀಫ್ ಧ್ವಜಾರೋಹಣ ನೆರವೇರಿಸುವುದ ರೊಂದಿಗೆ ಮತ್ತು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಉಸ್ಮಾನ್ ಬೇಗ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಚೆಯರ್ ಮ್ಯಾನ್ ಕೆ.ಎಂ.ಶರೀಫ್‌ರವರು ಪ್ರಾಸಾತಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಲಿ ಜಿನ್ನಾರವರು ರ್ವಾಕ ವರದಿಯನ್ನು ಮಂಡಿಸಿದರು. ನಂತರ ವರದಿ ಮೇಲೆ ಚರ್ಚೆ ನಡೆುತು.
ಪದಾಧಿಕಾರಿಗಳಾದ ಉಪ ಚೆಯರ್‌ಮ್ಯಾನ್ ಇ.ಎಂ.ಅಬ್ದುರ್ರಹ್ಮಾನ್, ಕಾರ್ಯದರ್ಶಿ ಅಬ್ದುಲ್ ವಾದ್ ಸೇಠ್, ಕೋಶಾಧಿಕಾರಿ ಮುಹಮ್ಮದ್ ಖಾಲಿದ್ ರಶಾದಿಯವರು ಚರ್ಚೆಗಳನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಲಿ ಜಿನ್ನಾರ ಸಮಾರೋಪ ಭಾಷಣ ಮಾಡುವ ಮೂಲಕ ಸಭೆಯು ಕೊನೆಗೊಂಡಿತು. ವಿವಿಧ ರಾಜ್ಯಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.







