ರಾಜ್ಯದಲ್ಲಿ ಬಿಸಿಯೂಟದ ಜೊತೆ ಶಾಲಾ ಮಕ್ಕಳಿಗೆ ಮೊಟ್ಟೆ
ಮಂಗಳೂರು,ಜ.27 : ರಾಜ್ಯದ ಎಲ್ಲಾ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡುವ ಯೋಜನೆಗೆ ಮುಂದಿನ ಮುಂಗಡ ಪತ್ರದಲ್ಲಿ ಹಣ ಮೀಸಲಿಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಜೊತೆ ಸಮಾಲೋಚನೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಐವನ್‌ಡಿ ಸೋಜ ಸುದ್ದಿಗೋಷ್ಠಿ ಯಲ್ಲಿಂದುತಿಳಿಸಿದ್ದಾರೆ.
ಸಾಮಾಜಿಕ ಪರಿವರ್ತನಾ ಜನಾಂದೋಲನ ಹೋರಾಟದ ಪರಿಣಾಮವಾಗಿರಾಜ್ಯದ6ವರ್ಷದೊಳಗಿನಎಲ್ಲಾಮಕ್ಕಳಿಗೂಅಪೌಷ್ಠಿಕತೆಅಧಿಕವಾಗಿರುವಹೈದರಾಬಾದ್‌ಕರ್ನಾಟಕ ದಜಿಲ್ಲೆಗಳಲ್ಲಿ 2012 ರಿಂದ ಮೊಟ್ಟೆ ವಿತರಿಸಲಾಗುವ ಯೋಜನೆ ಜಾರಿಯಲ್ಲಿದೆ.ಅದನ್ನು ರಾಜ್ಯದ ಎಲ್ಲಾ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೂ ನೀಡಬೇಕೆಂಬ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಐವನ್ ಸುದ್ದಿಗೋಷ್ಠಿಯಲ್ಲಿಂದುತಿಳಿಸಿದ್ದಾರೆ..
ಕರ್ನಾಟದಲ್ಲಿಯೂ 6 ವರ್ಷದೊಳಗಿನ ಮಕ್ಕಳಲ್ಲಿ ಶೇ 50ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.ಈ ನಿಟ್ಟಿನಲ್ಲಿ ಪೌಷ್ಠಿಕ ಆಹಾರ ಮೊಟ್ಟೆ ಉತ್ತಮವಾಗಿದೆ.ಮಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಗೊಂಡ ವಾರ್ಡ್‌ಗಳ ಅಭಿವೃದ್ಧಿಗೆ 100ಕೋಟಿ ರೂಪಾಯಿಯನ್ನು ಮುಂದಿನ ಮುಂಗಡ ಪತ್ರದಲ್ಲಿ ಮೀಸಲಿಡಬೇಕು.ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೆ ತರಲು 200ಕೋಟಿ ರೂಪಾಯಿ ಹಾಗೂ ಜಿಲ್ಲೆಯ ಮೂಲ ಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರೂ.ವಿಶೇಷ ಅನುದಾನ ಮೀಸಲಿಡಬೇಕೆಂದು ಮುಖ್ಯ ಮಂತ್ರಿಗೆ ಸಲಹೆ ನೀಡಿರುವುದಾಗಿ ಶಾಸಕ ಐವನ್ ಡಿ ಸೋಜ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ,ಮಾಜಿ ಮೇಯರ್ ಅಶ್ರಫ್,ಅಬ್ದುಲ್ ರವೂಫ್ ಮನಪಾ ಮಾಜಿ ಸದಸ್ಯರಾದ ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.







