ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ ದೇಶಕ್ಕೆ ಮಾದರಿ: ರಮಾನಾಥ ರೈ

ಬಂಟ್ವಾಳ, ಜ.27: ಗಣರಾಜ್ಯೋತ್ಸವದ ಅಂಗವಾಗಿ ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರ ರಕ್ಷಣೆಗೆ ‘ಸೌಹಾರ್ದತೆಯ ಸಂಕಲ್ಪ’ ಎಂಬ ಧ್ಯೇಯವಾಕ್ಯದೊಂದಿಗೆ ಮಿತ್ತಬೈಲಿನಲ್ಲಿ ಬೃಹತ್ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವ ಸರಪಳಿಯು ಮಾದರಿ ಕಾರ್ಯಕ್ರಮವಾಗಿದ್ದು, ದಾರಿತಪ್ಪುತ್ತಿರುವ ಯುವಜನತೆಯಲ್ಲಿ ದೇಶಪ್ರೇಮ ತುಂಬುವಲ್ಲಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಕೋಮುವಾದ ಅವರ ಸಮುದಾಯಕ್ಕೆ ಕೇಡಾದರೆ ಬಹುಸಂಖ್ಯಾತರ ಕೋಮುವಾದ ಇಡೀ ದೇಶಕ್ಕೆ ಅಪಾಯವಾಗಿದೆ ಎಂದರು.
ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ಸಮಾರಂದ ಅಧ್ಯಕ್ಷತೆ ವಹಿಸಿದರು. ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಪ್ರಾರ್ಥನೆಯನ್ನು ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸ್ಹಾಖ್ ಪೈಝಿ ದೇಶ ಸೇವೆಯ ಪ್ರತಿಜ್ಞೆ ಬೋಧಿಸಿದರು. ಹೈದರ್ ದಾರಿಮಿ ಕಲ್ಲಡ್ಕ, ಅನೀಸ್ ಕೌಸರಿ, ಖಾಸಿಂ ದಾರಿಮಿ ವಯನಾಡು ಮುಖ್ಯ ಬಾಷಣ ನಡೆಸಿದರು. ಹಾಜಿ ಮುಹಮ್ಮದ್ ಮಸೂದ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಐ.ಸಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ವೇದಿಕೆಯಲ್ಲಿ ಅಲಿ ತಂಙಳ್ ಕರಾವಳಿ, ಅಮೀರ್ ತಂಙಳ್ ಕಿನ್ಯ, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಸೆಯದ್ ಅಹ್ಮದ್ ಬಾಷಾ ತಂಙಳ್, ಉಸ್ಮಾನ್ ಪೈಝಿ ತೋಡಾರು, ಸ್ವದಖತುಲ್ಲಾಹ್ ಪೈಝಿ, ಉಸ್ಮಾನ್ ದಾರಿಮಿ ಪರಂಗಿಪೇಟೆ, ಖಲೀಲ್ ದಾರಿಮಿ ಮಿತ್ತಬೈಲ್, ಹಮೀದ್ ದಾರಿಮಿ, ಇರ್ಶಾದ್ ದಾರಿಮಿ ಮಿತ್ತಬೈಲು, ಮುಸ್ತಫಾ ಹಾಜಿ ಕೆಂಪಿ, ಟಿ.ಎಂ ಶಹೀದ್, ಹಾಜಿ ಬಿ. ಮೊಯಿದಿನಬ್ಬ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ಹನೀಫ್ ಹಾಜಿ ಬಂದರು, ಪೋಪಿ ಅಬೂಬಕ್ಕರ್ ಸುಳ್ಯ, ಮುಹಮ್ಮದಲಿ ಬಂಟ್ವಾಳ, ಡಿ.ಎಸ್.ಬಿ ಅಬ್ದುಲ್ ಖಾದರ್ ಬಂಟ್ವಾಳ, ಇಬ್ರಾಹೀಂ ಕೋಡಿಜಾಲ್, ಸುಲೈಮಾನ್ ಮಾಸ್ಟರ್ ಬಿ.ಡಿ, ಜಿ.ಮುಹಮ್ಮದ್, ಮುಹಮ್ಮದ್ ಶರೀಪ್, ಮುಹಮ್ಮದ್ ನಂದಾರಬೆಟ್ಟು, ಸದಾಶಿವ, ಮುಹಮ್ಮದ್ ಅಜ್ಜೇಡಿ, ಇಸ್ಮಾಯೀಲ್ ಅರಬಿ, ಇಸ್ಮಾಯಿಲ್ ಯಮಾನಿ, ಹನೀಪ್ ಮುಸ್ಲಿಯಾರ್ ತಾಳಿಪಡ್ಪು, ಅಲ್ತಾಪ್ ಮಿತ್ತಬೈಲ್, ಹಾರೂನ್ ಬಂಟ್ವಾಳ್ ಉಪಸ್ಥಿತರಿದ್ದರು. ಮಾನವ ಸರಪಳಿ ಸ್ವಾಗತ ಸಮಿತಿ ಚೇರ್‌ಮಾನ್ ಸಿದ್ದೀಕ್ ಅಬ್ದುಲ್ಲಾ ಬಂಟ್ವಾಳ್ ಸ್ವಾಗತಿಸಿ ಜಲೀಲ್ ಬದ್ರಿಯಾ ವಂದಿಸಿದರು. ಇರ್ಫಾನ್ ವೌಲವಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ: ಸಭಾ ಕಾರ್ಯಕ್ರಮದ ಮೊದಲು ಗೂಡಿನಬಳಿಯಿಂದ ಶಾಂತಿಯಂಗಡಿವರೆಗೆ ಆಕರ್ಷಕ ಜಾಥಾ ನಡೆಯಿತು. ಸಮವಸ್ತ್ರಧಾರಿಗಳಾದ ವಿಖಾಯ, ತ್ವಲಬಾ, ಕ್ಯಾಂಪಸ್, ಪಾಣಕ್ಕಾಡ್ ಪಟ್ಟಾಳಂ, ದಫ್, ಸ್ಕೌಟ್ ವಿಭಾಗಗಳು ಮೆರವಣಿಗೆಗೆ ಮೆರುಗು ನೀಡಿತ್ತು.








