ಸ್ಮಿತ್ ಔಟಾಗಲು ಚಾನಲ್ 9 ಕಾರಣ
ಸಿಡ್ನಿ, ಜ.27: ಆಸ್ಟ್ರೇಲಿಯದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮಂಗಳವಾರ ನಡೆದ ಭಾರತ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಔಟಾಗಲು ಚಾನಲ್ 9 ಕಾರಣ ಎನ್ನಲಾಗಿದ್ದು, ಇದರಿಂದಾಗಿ ಟ್ವೆಂಟಿ-20 ಪಂದ್ಯದ ವೇಳೆ ಆನ್-ಫೀಲ್ಡ್ ಮೈಕ್ರೋಫೋನ್ ಬಳಕೆಯ ಬಗ್ಗೆ ಹೊಸ ವಿವಾದ ಉಂಟಾಗಿದೆ.
ಸ್ಮಿತ್ ಅವರು ಫಿಂಚ್ ಜೊತೆ ಆಡುತ್ತಿದ್ದಾಗ ಚಾನಲ್ 9 ಜೊತೆ ಸಂಪರ್ಕದಲ್ಲಿದ್ದರು.
ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ 188 ರನ್‌ಗಳ ಗೆಲುವಿನ ಸವಾಲು ಪಡೆದಿತ್ತು. ಸ್ಮಿತ್ ಅವರು ಟಿವಿ ವೀಕ್ಷಕ ವಿವರಣೆಗಾರನ ಜೊತೆ ಮಾತನಾಡಿದ ಸ್ವಲ್ಪ ಹೊತ್ತಿನಲ್ಲಿ ಔಟಾಗಿದ್ದಾರೆ. ರವೀಂದ್ರ ಜಡೇಜ ಓವರ್‌ನಲ್ಲಿ ಸ್ಮಿತ್ ಅವರು ವಿರಾಟ್ ಕೊಹ್ಲಿಗೆ ಕ್ಯಾಚ್ ಕೊಟ್ಟಿದ್ದಾರೆ. ಸ್ಮಿತ್ 21 ರನ್ ಗಳಿಸಿ ಔಟಾಗಿದ್ದರು.
Next Story





