ವಾರ್ನರ್‌ಗೆ ಆಲನ್ ಬಾರ್ಡರ್ ಪದಕ; ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ

ಮೆಲ್ಬೋರ್ನ್, ಜ.27: ಆಸ್ಟ್ರೇಲಿಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ನಾಯಕ ಸ್ಟೀವನ್ ಸ್ಮಿತ್‌ರನ್ನು ಹಿಂದಕ್ಕೆ ತಳ್ಳಿ ಆಲನ್ ಬಾರ್ಡರ್ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ವಾರ್ನರ್ ಈ ಸ್ಪರ್ಧೆಯಲ್ಲಿ ಟೆಸ್ಟ್ ತಂಡದ ನಾಯಕ ಸ್ಮಿತ್‌ರನ್ನು ಹಿಂದಕ್ಕೆ ತಳ್ಳಿ ಪ್ರಶಸ್ತಿ ಜಯಿಸಿದರು. ಕಳೆದ ವರ್ಷ ಈ ಪ್ರಶಸ್ತಿ ಗೆದ್ದುಕೊಂಡಿದ್ದ ಸ್ಮಿತ್ ಎರಡನೆ ಬಾರಿ ಪ್ರಶಸ್ತಿ ಜಯಿಸುವ ಹಾದಿಯಲ್ಲಿದ್ದರು.
ವಾರ್ನರ್ ಕಳೆದ ವರ್ಷ ಟೆಸ್ಟ್‌ನಲ್ಲಿ 55.09 ಸರಾಸರಿಯಂತೆ 1,212 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. 23 ಇನಿಂಗ್ಸ್‌ಗಳಳ್ಲಿ 4 ಶತಕ ಮತ್ತು 7 ಅರ್ಧಶಕ ಗಳಿಸಿದ್ದ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ 253.
ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 644 ರನ್ ಮತ್ತು 19 ವಿಕೆಟ್ ಪಡೆದು ವರ್ಷದ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಸಾಧಕಿಗೆ ನೀಡಲಾಗುವ ಬೆಲಿಂದಾ ಕ್ಲಾರ್ಕ್ ಪದಕ ಎಲಿಸೆ ಪೆರ್ರೆಗೆ ದೊರಕಿದೆ. ಅಲೆಕ್ಸ್ ರಾಸ್‌ಗೆ ಬ್ರಾಡ್ಮನ್ ವರ್ಷದ ಯುವ ಕ್ರಿಕೆಟರ್ ಪ್ರಶಸ್ತಿ, ಆ್ಯಡಮ್ ವೊಗ್ಸ್ ವರ್ಷದ ದೇಶಿಯ ಕ್ರಿಕೆಟಿಗ ಪ್ರಶಸ್ತಿ. ಜೆಫ್ ಥ್ಯಾಮ್ಸನ್ ಮತ್ತು ವಾಲಿ ಗ್ರಾಟ್‌ಗೆ ಹಾಲ್ ಆಫ್ ಫೆಮ್ ಗೌರವ ದೊರಕಿದೆ.
,,,,,,,,,,,,





