ದೇವಧರ್ ಟ್ರೋಫಿ: ಗುಜರಾತ್ ವಿರುದ್ಧ ಭಾರತ ‘ಎ’ ತಂಡಕ್ಕೆ ಜಯ
ಕಾನ್ಪುರ, ಜ.27:ಇಲ್ಲಿ ನಡೆದ ದೇವಧರ್ ಟ್ರೋಫಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಭಾರತ ‘ಎ’ ತಂಡ 6 ವಿಕೆಟ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಲುವಿಗೆ 273 ರನ್‌ಗಳ ಸವಾಲನ್ನು ಪಡೆದ ಇಂಡಿಯಾ ‘ಎ’ ತಂಡ ಇನ್ನೂ 16 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.
ನಾಯಕ ಹಾಗೂ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಶತಕ (119) ದಾಖಲಿಸಿದ ಪರಿಣಾಮವಾಗಿ ಗುಜರಾತ್ ತಂಡದ ಸ್ಕೋರ್ 49.2 ಓವರ್‌ಗಳಲ್ಲಿ 272 ರನ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಡಿಯಾ ಎ‘ ತಂಡ ಫೈಝ್ ಫಝಲ್( 53), ನಾಯಕ ಅಂಬಟಿ ರಾಯುಡು(75), ಕೇದಾರ್ ಜಾಧವ್(91) ಅರ್ಧಶತಕಗಳ ಸಹಾಯದಿಂದ ಭಾರತ ‘ಎ’ ತಂಡಗೆಲುವಿನ ದಡ ಸೇರಿತು.
Next Story





