ಮಂಗಳೂರು, ಅತ್ಯಾಚಾರಿಗೆ 7 ವರ್ಷ ಕಠಿಣ ಸಜೆ
ಮಂಗಳೂರು, ಜ. 27: ಯುವತಿಯೊಬ್ಬಳ ಮೇಲಿನ ಅತ್ಯಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಯೋರ್ವನಿಗೆ ಇಲ್ಲಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ.ದಂಡ ವಿಸಿ ಇಂದು ತೀರ್ಪು ನೀಡಿದೆ.
ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಕಾಯರಮುಗೇರು ಮನೆಯ ಶಶಿ ಯಾನೆ ಪರಮೇಶ್ವರ (31) ಶಿಕ್ಷೆಗೊಳಗಾದ ಅಪರಾ. ಸೆಕ್ಷನ್ 376 (ಅತ್ಯಾಚಾರ) ಎಸಗಿದ್ದಕ್ಕೆ 7 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ.ದಂಡ, ಸೆಕ್ಷನ್ 417 (ಮೋಸ) 3 ತಿಂಗಳು ಸಜೆ ವಿಸಿ ನ್ಯಾಯಾಲಯ ತೀರ್ಪು ನೀಡಿದೆ.ದಂಡ ತೆರಲು ತಪ್ಪಿದಲ್ಲಿ ಮತ್ತೆ 2 ತಿಂಗಳು ಸಜೆ ಅನುಭವಿಸುವಂತೆ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ದಂಡದ ಮೊತ್ತದಲ್ಲಿ 8 ಸಾವಿರ ರೂ.ವನ್ನು ಸಂತ್ರಸ್ತೆಗೆ ನೀಡಬೇಕು. ಸಂತ್ರಸ್ತೆಯ ಪುನರ್ವಸತಿ ಕಲ್ಪಿಸಲು ಕಾನೂನು ಸೇವಾ ಪ್ರಾಕಾರದ ಮೂಲಕ ನೀಡುವ ಪರಿಹಾರವನ್ನು ಒದಗಿಸಬೇಕು ಎಂದು ನ್ಯಾಯಾಧೀಶರಾದ ಡಿ.ಟಿ.ಪುಟ್ಟರಂಗಸ್ವಾಮಿ ತೀರ್ಪಿನಲ್ಲಿ ಹೇಳಿದ್ದಾರೆ.
ಪರಮೇಶ್ವರ ಹಾಗೂ ಯುವತಿ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 2014 ಮೇ 19 ರಂದು ಯುವತಿ ತನ್ನ ಮನೆಯಲ್ಲಿ ಒಬ್ಬಳಿದ್ದ ಸಂದರ್ಭದಲ್ಲಿ ಆಕೆಯ ಮನೆಗೆ ಹೋಗಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ನೆರೆ ಮನೆಯವರು ಗಮನಿಸಿ ಯುವತಿಯ ಅಣ್ಣನಿಗೆ ತಿಳಿಸಿದ್ದರು. ಅನಂತರ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಕಡಬ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಳಿಕ ಮೇ 26 ರಂದು ಪೊಲೀಸರು ಆತನನ್ನು ಬಂಧಿಸಿದ್ದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.







