ಕೃತಕ ಬುದ್ಧಿಮತ್ತೆಯ ಜನಕ ಮಿನ್‌ಸ್ಕಿ ಇನ್ನಿಲ್ಲ
ಬೊಸ್ಟನ್,ಜ.27: ಯಂತ್ರಗಳು ಮಾನವರಂತೆ ಚಿಂತಿಸಿ ಕಾರ್ಯಪ್ರವೃತ್ತವಾಗುವಂತೆ ಮಾಡುವ ಮೂಲಕ ‘ಕೃತಕ ಬುದ್ಧಿಮತ್ತೆ’ಯ ಜನಕನೆಂದೇ ಖ್ಯಾತರಾದ ಮಾರ್ವಿನ್ ಮಿನ್‌ಸ್ಕಿ ರವಿವಾರ ನಿಧನರಾಗಿದ್ದಾರೆಂದು ಅಮೆರಿಕದ ಮ್ಯಾಸಚ್ಯೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಬುಧವಾರ ಪ್ರಕಟಿಸಿದೆ. 88 ವರ್ಷ ವಯಸ್ಸಿನ ಮಿನ್‌ಸ್ಕಿ ಮೆದುಳಿನ ರಕ್ತಸ್ರಾವದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಮಾನವರ ವೌಖಿಕ ಆದೇಶಗಳನ್ನು ಕಂಪ್ಯೂಟರ್‌ಗಳು ಅರಿತುಕೊಳ್ಳುವಂತೆ ಮಾಡುವ ಹಾಗೂ ಚೆಸ್ ಸ್ಪರ್ಧೆಯಲ್ಲಿ ಅವು ಗ್ರಾಂಡ್‌ಮಾಸ್ಟರ್‌ಗಳನ್ನೂ ಸೋಲಿಸುವಂತಹ ತಂತ್ರಜ್ಞಾನದ ಸೃಷ್ಟಿಗೆ, ಮಾರ್ವಿನ್ ಮಿನ್‌ಸ್ಕಿ ಕಾರಣಕರ್ತರಾಗಿದ್ದಾರೆ.
ಮಿನ್‌ಸ್ಕಿ ಅವರು 1959ರಲ್ಲಿ ಎಂಐಟಿಯಲ್ಲಿ ಕೃತಕ ಬೌದ್ಧಿಕತೆ ಸಮೂಹ ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮಾನವನೊಂದಿಗೆ ಸಂವಹನವನ್ನು ಸಾಧಿಸಬಲ್ಲಂತಹ ಕಂಪ್ಯೂಟರ್‌ಗಳ ಸೃಷ್ಟಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
Next Story





