ಉಳ್ಳಾಲ: ವಿವಿಧ ಸರಕಾರಿ ಸೌಲಭ್ಯಗಳ ವಿತರಣೆ

ಉಳ್ಳಾಲ, ಜ.27: ನಗರ ವಸತಿ ಯೋಜನೆಯಡಿ ಉಳ್ಳಾಲ ನಗರಸಭೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ 300 ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಉಳ್ಳಾಲನಗರಸಭಾ ಕಾರ್ಯಾಲಯದಲ್ಲಿ ನಗರಸಭಾ ವ್ಯಾಪ್ತಿಯ ಜನರಿಗೆ ಶೇ.24.10ರ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ,ಶೇ.3ರಯೋಜನೆಯಡಿಯಲ್ಲಿ ಪೋಷಣಾ ಭತ್ತೆ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು. ನಗರಸಭಾ ಅಧ್ಯಕ್ಷೆ ಗಿರಿಜಾ ಬಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಪೌರಾಯುಕ್ತೆ ರೂಪಾ ಡಿ. ಶೆಟ್ಟಿ, ಉಪಾಧ್ಯಕ್ಷೆ ರಝಿಯಾ ಇಬ್ರಾಹೀಂ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತ್ತಾಕ್, ಕೌನ್ಸಿಲರ್‌ಗಳಾದ ಫಾರೂಕ್ ಉಳ್ಳಾಲ್, ದಿನೇಶ್ ರೈ, ಸುಕುಮಾರ್, ಸೂರ್ಯಕಲಾ, ಸುಂದರ ಉಳಿಯ, ಭಾರತಿ, ಶಾಂತಿ ಡಿಸೋಜ, ಅಶ್ರಫ್ ಕೋಡಿ, ಮುಸ್ತಫಾ ಅಬ್ದುಲ್ಲಾ, ಬಾಝಿಲ್ ಡಿಸೋಜ, ಕುಂಞಿಮೋನು, ಮುಹಮ್ಮದ್ ಹನೀಫ್, ಪೊಡಿಮೋನು ಮತ್ತಿತರರು ಉಪಸ್ಥಿತರಿದ್ದರು. ಯು.ಎ. ಇಸ್ಮಾಯೀಲ್ ಕಾರ್ಯಕ್ರಮನಿರೂಪಿಸಿದರು.





