ಎಎಫ್‌ಸಿ ಚಾಂಪಿಯನ್ಸ್ ಲೀಗ್: ಭಾರತಕ್ಕೆ ಐತಿಹಾಸಿಕ ಜಯ
ಕೋಲ್ಕತಾ, ಜ.27: ಎಎಫ್‌ಸಿ ಚಾಂಪಿಯನ್ಸ್ ಲೀಗ್ ಅರ್ಹತಾ ಪಂದ್ಯದಲ್ಲಿ ಸಿಂಗಾಪುರದ ಟಂಪೈನ್ಸ್ ರೋವರ್ಸ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದ ಮೋಹನ್ ಬಗಾನ್ ಕ್ಲಬ್ ಐತಿಹಾಸಿಕ ಸಾಧನೆ ಮಾಡಿದೆ.
ಮೋಹನ್ ಬಗಾನ್ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿದ ಭಾರತದ ಮೊದಲ ಕ್ಲಬ್ ತಂಡ ಎಂಬ ಕೀರ್ತಿಗೆ ಭಾಜನವಾಯಿತು.
ಬಗಾನ್ ತಂಡದ ಪರ ಜೆಜೆ ಲಾಲ್‌ಪೆಕುಲ್ವ(5ನೆ ನಿಮಿಷ), ಕಾರ್ನೆಲ್ ಗ್ಲೆನ್(41ನೆ ನಿ.) ಹಾಗೂ ಕಟ್ಸುಮಿ ಯುಸಾ(83ನೆ ನಿ.) ತಲಾ ಒಂದು ಗೋಲು ಬಾರಿಸಿದರು. ರೋವರ್ಸ್ ಪರ 43ನೆ ನಿಮಿಷದಲ್ಲಿ ಯಾಸಿರ್ ಹನಪಿ ಏಕೈಕ ಗೋಲು ಬಾರಿಸಿದ್ದಾರೆ.
Next Story





