ಯುನಿವೆಫ್‌ನಿಂದ ವಿದ್ಯಾರ್ಥಿ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ

ಮಂಗಳೂರು, ಜ.27: ಯುನಿವೆಫ್ ಕರ್ನಾಟಕ ಇದರ ವತಿಯಿಂದ ವಿದ್ಯಾರ್ಥಿ ಸಮಾವೇಶ ಮತ್ತು ಜಿಲ್ಲೆಯ ಎಸೆಸೆಲ್ಸಿ ಹಾಗೂ ಪಿಯುಸಿಯ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಮೌಲಾನಾ ಅಬುಲ್ ಕಲಾಂ ಆಝಾದ್ ಮತ್ತು ಸರ್ ಅಲ್ಲಾಮ ಇಕ್ಬಾಲ್ ಪ್ರಶಸ್ತಿ ವಿತರಣಾ ಸಮಾರಂಭವು ಇತ್ತೀಚೆಗೆ ನಗರದ ಬದ್ರಿಯಾ ಕಾಲೇಜು ಮತ್ತು ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಜರಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ಲತೀಫ್ ಹಾಗೂ ಬದ್ರಿಯ ಕಾಲೇಜು ಪ್ರಾಂಶುಪಾಲ ಎನ್. ಇಸ್ಮಾಯೀಲ್ ಭಾಗವಹಿಸಿದ್ದರು
ಯುನಿವೆ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಘಟಕದ ಸಂಚಾಲಕ ಸೈಫುದ್ದೀನ್ ಹಾಗೂ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೌಫಲ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಸಈದ್ ಅಹ್ಮದ್ ಮತ್ತು ಫಹೀಮುದ್ದೀನ್ ಕಿರಾಅತ್ ಪಠಿಸಿದರು.
Next Story





