ಶನಿ ದೇವಾಲಯ ವಿವಾದ ಫಡ್ನವೀಸ್‌ರಿಂದ ಕಾರ್ಯಕರ್ತೆಯರ ಭೇಟಿ; ಚಳವಳಿಗೆ ಬೆಂಬಲ
ಅಹ್ಮದ್‌ನಗರ, ಜ.27: ಅಹ್ಮದ್‌ನಗರದ ಶನಿ ಶಿಂಗಣಾಪುರದ ದೇವಾಲಯವನ್ನು ಪ್ರವೇಶಿಸದಂತೆ ನಿನ್ನೆ ಮಧ್ಯ ದಾರಿಯಲ್ಲೆ ಪೊಲೀಸರಿಂದ ತಡೆಯಲ್ಪಟ್ಟಿದ್ದ ಕಾರ್ಯಕರ್ತೆಯರನ್ನು ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿಯಾಗಿದ್ದಾರೆ.
ಮುಖ್ಯಮಂತ್ರಿ ತಮ್ಮನ್ನು ಬೆಂಬಲಿಸುವೆನೆಂದು ಹೇಳಿದ್ದಾರೆ. ಅವರು ತಮ್ಮ ಚಳವಳಿಯನ್ನು ಬೆಂಬಲಿಸಿದ್ದಾರೆ. ಸಾಧ್ಯವದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ತಾನು ಸರಕಾರವನ್ನು ವಿನಂತಿಸುತ್ತೇನೆ. ಇಂತಹ ನಿಯಮಗಳನ್ನು ದೇಶಾದ್ಯಂತ ರದ್ದುಗೊಳಿಸಬೇಕೆಂದು ನಿನ್ನೆ 500ರಷ್ಟು ಕಾರ್ಯಕರ್ತೆಯರ ನೇತೃತ್ವ ವಹಿಸಿದ್ದ ತೃಪ್ತಿ ದೇಸಾಯಿ , ಪುಣೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ತಿಳಿಸಿದ್ದಾರೆ.
ತಾವು ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿದ್ದೆವು. ಅವರು ತಮ್ಮನ್ನು ಭೇಟಿ ಮಾಡುವೆನೆಂದು ತಿಳಿಸಿದ್ದರೆಂದು ಫಲಿತಾಂಶದಿಂದ ಸಂತೋಷಗೊಂಡಿದ್ದ ದೇಸಾಯಿ ಹೇಳಿದರು.
Next Story





