ಎರಡನೆಯ ಮಂಡಲ್ ಕ್ರಾಂತಿಗೆ ಪಿಎಫ್‌ಐ ಕರೆ
ಕಲ್ಲಿಕೋಟೆ, ಜ.27: ಎಲ್ಲ ಜಾತಿ ಮತ್ತು ಸಮುದಾಯಗಳಿಗೆ ತಮ್ಮ ಜನಸಂಖ್ಯೆಯಾಧಾರಿತ ಪ್ರಾತಿನಿಧ್ಯಕ್ಕಾಗಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೋಟಾ ಮೀಸಲಾತಿ ವ್ಯವಸ್ಥೆಯನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸಭೆಯು ಒತ್ತಾಯಿಸಿದೆ. ಜನವರಿ 22ರಿಂದ 24ರ ವರೆಗೆ ಕೇರಳದ ಮಲಪ್ಪುರಂ ಜಿಲ್ಲೆಯ ಮಲಬಾರ್ ಹೌಸ್‌ನಲ್ಲಿ ನಡೆದ ಆಂತರಿಕ ಬಲ ನೀಡುವ ಮತ್ತು ಮೌಲ್ಯಮಾಪನ ಮಾಡುವ ರಾಷ್ಟ್ರೀಯ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು.
ಸಭೆಯಲ್ಲಿ ಸಮಕಾಲೀನ ವಿಷಯಗಳಾದ ಸಮಾನ ಅವಕಾಶ ಆಯೋಗ ಮಸೂದೆ, ಬಾಬರಿ ಮಸೀದಿಯ ಪುನರ್‌ನಿರ್ಮಾಣ, ಆರೆಸ್ಸೆಸ್ ಭಾಗವಾದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ರಾಷ್ಟ್ರೀಯ ಮಂಚ್, ಎಎಂಯು ಮತ್ತು ಜೆಎಂಐ ವಿಶ್ವವಿದ್ಯಾನಿಲಯಗಳ ಅಲ್ಪಸಂಖ್ಯಾತ ಮಾನ್ಯತೆಯನ್ನು ಉಳಿಸುವುದು, ಡಿಎನ್‌ಎ ಪರಿಚಯದ ಮಸೂದೆಯನ್ನು ಹಿಂಪಡೆಯುವುದು, ಯುಎಪಿಎಯನ್ನು ರದ್ದುಗೊಳಿಸುವುದು, ಕ್ಯಾಂಪಸ್‌ಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಹಾಗೂ ಅರಬ್ ಮುಸ್ಲಿಮ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹಿಂಸೆ ಮತ್ತು ಬಿಕ್ಕಟ್ಟು ಮುಂತಾದವುಗಳ ಮೇಲೆ ನಿರ್ಣಯ ಕೈಗೊಳ್ಳಲಾಯಿತು.
ರಾಷ್ಟ್ರೀಯ ಮಂಚ್ ಎಂಬ ಆರೆಸ್ಸೆಸ್ ಘಟಕವು ಈಗಾಗಲೇ ದೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ರೂವಾರಿಗಳೊಂದಿಗೆ ಸಂಪರ್ಕ ಹೊಂದಿದೆ. ತನಿಖಾ ಸಂಸ್ಥೆಗಳು ಕಂಡುಕೊಂಡಿರುವಂತೆ ಇದು ಆರೆಸ್ಸೆಸ್ ರಾಷ್ಟ್ರೀಯ ಸಮಿತಿ ಸದಸ್ಯ ಇಂದ್ರೇಶ್ ಕುಮಾರ್ ನೇತತ್ವದಲ್ಲಿ ನಡೆಯುತ್ತಿರುವ ಸಂಘಟನೆಯಾಗಿದೆ ಎಂದು ಸಭೆಯು ಜನರನ್ನು ಎಚ್ಚರಿಸಿದೆ. ರಾಷ್ಟ್ರೀಯ ಸಭೆಯು ಅಧ್ಯಕ್ಷ ಕೆ.ಎಂ.ಶರೀಫ್ ಧ್ವಜಾರೋಹಣ ಗೈದರು. ಮತ್ತು ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಉಸ್ಮಾನ್ ಬೇಗ್ ಪಾರ್ಥಿಸಿದರು. ಆರಂಭವಾಯಿತು. ಅಧ್ಯಕ್ಷ ಕೆ.ಎಂ.ಶರೀಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಲಿ ಜಿನ್ನಾ, ಪದಾಧಿಕಾರಿಗಳಾದ ಉಪಾ ಅಧ್ಯಕ್ಷ ಇ.ಎಂ.ಅಬ್ದುರ್ರಹ್ಮಾನ್, ಕಾರ್ಯದರ್ಶಿ ಅಬ್ದುಲ್ ವಾದ್ ಸೇಠ್, ಕೋಶಾಧಿಕಾರಿ ಮುಹಮ್ಮದ್ ಖಾಲಿದ್ ರಶಾದಿ ಉಪಸ್ಥಿತರಿದ್ದರು.







