ನೀರಿನ ಸೌಕರ್ಯ ಒದಗಿಸಿ
ಉಡುಪಿಯ ಹೃದಯ ಭಾಗದಿಂದ ಹೊರವಲಯ ಅಜ್ಜರಕಾಡು ಪ್ರದೇಶದಲ್ಲಿ ನವೀಕೃತಗೊಂಡ ಬುಜಂಗಪಾರ್ಕ್ ಉದ್ಯಾನವನವಿದೆ. ದಿನನಿತ್ಯ ಮುಂಜಾನೆಯಿಂದ ರಾತ್ರಿಯವರೆಗೂ ಉದ್ಯಾನವನದಲ್ಲಿ ಜನರು ವಿಹರಿಸುತ್ತಾರೆ. ವಾಯು ವಿಹಾರಿಗಳು, ನಿಸರ್ಗ ಪ್ರಿಯರು, ಆಟವಾಡುವ ಮಕ್ಕಳು ಮತ್ತು ಸ್ಕೇಟಿಂಗ್ ಟ್ರಾಕ್‌ಗೆ ಕ್ರೀಡಾಳುಗಳು ಬರುತ್ತಾರೆ. ಆದರೆ ಇಲ್ಲಿ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಗರಾಡಳಿತ ಇನ್ನಾದರೂ ಉದ್ಯಾನವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಲ್ಲಿ ಉದ್ಯಾನವನಕ್ಕಾಗಮಿಸುವವರಿಗೆ ಅನುಕೂಲವಾಗುತ್ತದೆ.
Next Story





