Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಪ್ತ ...

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಪ್ತ ಮಂಗಳೂರಿನ ಅತ್ತಾವರ ಎಲ್ಲಪ್ಪ

ಶ್ರೀನಿವಾಸ ಕಾರ್ಕಳಶ್ರೀನಿವಾಸ ಕಾರ್ಕಳ28 Jan 2016 8:21 PM IST
share
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಪ್ತ  ಮಂಗಳೂರಿನ ಅತ್ತಾವರ ಎಲ್ಲಪ್ಪ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ  ಅನೇಕ ಧುರೀಣರು ಸಕ್ರಿಯ ಪಾತ್ರ ವಹಿಸಿ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರಾದರೂ ಇಂಥ ಅನೇಕ ಸ್ವಾತಂತ್ರ್ಯ ಸೇನಾನಿಗಳ ಬಲಿದಾನದ ಕತೆ ಜನರ ನೆನಪಿನಿಂದ ಮಾಸಿಹೋಗಿರುವುದು ನಿಜಕ್ಕೂ ವಿಷಾದದ ಸಂಗತಿ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಚಾರಿತ್ರಿಕ ಪಾತ್ರದ ಹೊರತಾಗಿಯೂ ಮರೆವಿಗೆ ಸಂದು ಹೋದ ಅಂಥ ಒಂದು ಹೆಸರು ಮಂಗಳೂರಿನ ಅತ್ತಾವರ ಎಲ್ಲಪ್ಪ ಅವರದು. ಅತ್ತಾವರ ಎಲ್ಲಪ್ಪ ಅವರು ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿಯಾಗಿದ್ದವರು. ಇಂಡಿಯನ್ ನ್ಯಾಷನಲ್ ಆರ್ಮಿಯ ಆರ್ಥಿಕ ಬೆನ್ನುಲುಬಿನಂತಿದ್ದವರು. ಬೋಸ್ ನೇತೃತ್ವದ ಸ್ವತಂತ್ರ ಭಾರತದ ಮೊದಲ ಮಂತ್ರಿಮಂಡಲದಲ್ಲಿ ಪ್ರಭಾವಿ ಸಚಿವರಾಗಿದ್ದರು.

ಎಲ್ಲಪ್ಪನವರು ಹುಟ್ಟಿದ್ದು ಮಂಗಳೂರಿನ ಅತ್ತಾವರದಲ್ಲಿ 1912 ರಲ್ಲಿ. ಇಂಟರ್ ಮೀಡಿಯೇಟನ್ನು ಮಂಗಳೂರು ಹೃದಯಭಾಗದ ಸರಕಾರಿ ಕಾಲೇಜಿನಲ್ಲಿ ಮುಗಿಸಿ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿಯನ್ನು ಪೂರೈಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಮದ್ರಾಸ್ ಗೆ ತೆರಳುತ್ತಾರೆ. ದುಡಿಯುತ್ತಲೇ ಕಲಿಕೆಯ ಯತ್ನದಲ್ಲಿದ್ದಾಗ ಒಂದು ದಿನ ಬ್ರಿಟಿಷ್ ಅಧಿಕಾರಿಯೊಬ್ಬರ ಜೀಪು ಡಿಕ್ಕಿಹೊಡೆದು ಇವರ ತೊಡೆಯ ಎಲುಬು ಮುರಿಯುತ್ತದೆ. ಆಗ ಮಾನವೀಯ ಅಂತಃಕರಣದ ಆ ಅಧಿಕಾರಿ ಎಲ್ಲಪ್ಪನವರಿಗೆ ದೊಡ್ಡ ಮೊತ್ತದ ಪರಿಹಾರ ಕೊಡುತ್ತಾನೆ. ಈ ಪರಿಹಾರ ಹಣದಿಂದಲೇ ಅವರು ಸಣ್ಣ ವ್ಯಾಪಾರ ಮಾಡಿ ಉತ್ತಮ ಗಳಿಕೆ ಮಾಡಿ ಟ್ರಾಮ್ ಕಂಪೆನಿಯೊಂದನ್ನು ಶುರುಮಾಡುತ್ತಾರೆ. ಅಲ್ಲಿಂದ ಉನ್ನತ ಶಿಕ್ಷಣಕ್ಕಾಗಿ ಅವರು ಲಂಡನ್ ಗೆ ಹೋಗುತ್ತಾರೆ. 1939 ರಲ್ಲಿ ಮೊದಲ ರ್ಯಾಂಕ್ ನೊಂದಿಗೆ ‘ಬಾರ್ ಅಟ್ ಲಾ’ ಪದವಿ ಪಡೆಯುತ್ತಾರೆ.

ಇಂಗ್ಲೆಂಡ್ ನಲ್ಲಿರುವಾಗಲೇ ಏಶ್ಯನ್ನರ ಬಗ್ಗೆ ಬಿಳಿಯರ ತಾತ್ಸಾರದಿಂದ ಅವರ ಮನಸ್ಸು ಕ್ರೋಧತಪ್ತವಾಗಿತ್ತು. ಅಲ್ಲಿಂದ ಭಾರತಕ್ಕೆ ಮರಳಿದವರು ಬಳಿಕ ಸಿಂಗಾಪುರಕ್ಕೆ ತೆರಳಿ ಅಲ್ಲಿಯೇ ನೆಲೆಸುತ್ತಾರೆ. ತಮ್ಮ ಕಾನೂನು ಜ್ಞಾನ ಮತ್ತು ಜನರೊಂದಿಗಿನ ಒಡನಾಟದಿಂದ ಗಣ್ಯವ್ಯಕ್ತಿ ಎನಿಸಿಕೊಳ್ಳುತ್ತಾರೆ. ಅಪಾರ ಆಸ್ತಿಪಾಸ್ತಿಗಳ ಒಡೆಯರಾಗುತ್ತಾರೆ. ನೇತಾಜಿಯವರು ಇಂಡಿಯನ್ ನ್ಯಾಷನಲ್ ಲೀಗ್ ಮುಖ್ಯಸ್ಥರಾದಾಗ ಅತ್ತಾವರ ಎಲ್ಲಪ್ಪನವರು ಅವರ ಬಲಗೈ ಬಂಟರಾಗುತ್ತಾರೆ. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ ಅತ್ಯಂತ ಪ್ರಭಾವಿ ಮತ್ತು ಬಲಿಷ್ಠವಾದ ಸಿಂಗಪುರ ಘಟಕದ ಅಧ್ಯಕ್ಷರೂ ಆಗುತ್ತಾರೆ. ಐಎನ್ಎ ಯ ಆರ್ಥಿಕ ವಹಿವಾಟು ಮತ್ತು ಶಸ್ತ್ರಾಸ್ತ ಖರೀದಿ ಎಲ್ಲವನ್ನೂ ನೋಡುತ್ತಿದ್ದರು ಎಲ್ಲಪ್ಪನವರು.

ಮುಂದೆ ಬ್ರಿಟಿಷರು ಮತ್ತು ಐಎನ್ಎ ನಡುವೆ ಬರ್ಮಾ ಪ್ರದೇಶದಲ್ಲಿ ನಡೆದ ಕದನದಲ್ಲಿ ಯುದ್ಧರಂಗದಲ್ಲಿಯೇ ಎಲ್ಲಪ್ಪ ಹತರಾದರು ಎಂಬ ಸುದ್ದಿಯಿದೆ. ಆದರೆ ನುರಿತ ತಂತ್ರಗಾರ ಎಲ್ಲಪ್ಪನವರು ವಿರೋಧಿಗಳ ಕೈಗೆ ಸಿಕ್ಕಿಬೀಳುವವರಲ್ಲ ಎನ್ನುತ್ತಾರೆ ಅವರ ಆಪ್ತರು. ಹೀಗಾಗಿ ನೇತಾಜಿಯಷ್ಟೇ ನಿಗೂಢವಾಯಿತು ಎಲ್ಲಪ್ಪನವರ ಅಂತ್ಯ ಕೂಡ.

ಅತ್ತ ಎಲ್ಲಪ್ಪನವರು ಗೂರ್ಖಾ ಗುಂಡಿಗೆ ಬಲಿಯಾದರು ಎಂಬ ಸುದ್ದಿ ಬರುತ್ತಲೇ ಇತ್ತ ಅವರ ಪತ್ನಿ ಸೀತಮ್ಮ ಮಹಾಮಾಯಿ ದೇಗುಲದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ (ಲಂಡನ್ ಗೆ ಹೊರಡುವಾಗಷ್ಟೇ ಅವರು ಮದುವೆಯಾಗಿದ್ದರು.  ಮದುವೆಯಾಗಿ ಸತಿಪತಿ ಜತೆಗಿದ್ದುದು ಕೇವಲ 17 ದಿನ. ಅವರಿಗೆ ಮಕ್ಕಳಿರಲಿಲ್ಲ). 

ನೇತಾಜಿಯವರ ಇನ್ನೊಬ್ಬ ಆಪ್ತರಾದ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರಿಗೆ ಎಲ್ಲಪ್ಪರ ಹೋರಾಟದ ವಿವರಗಳೆಲ್ಲವೂ ಗೊತ್ತಿದ್ದವು. ಆಗರ್ಭ ಶ್ರೀಮಂತರಾಗಿದ್ದ ಎಲ್ಲಪ್ಪರ ಕುಟುಂಬ ಕಡುಬಡತನದ ಸ್ಥಿತಿ ತಲಪಿದ್ದೂ ಗೊತ್ತಿತ್ತು. ಹಾಗಾಗಿ ಅವರು ಎಲ್ಲಪ್ಪರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದರು. ಎಲ್ಲಪ್ಪನವರ ಕಿರಿಯ ತಂಗಿ ಬೇಬಿ ಸಂಜೀವಿ ಮತ್ತು ಅವರ ಪತಿ ಅತ್ತಾವರ ಸುಂದರದಾಸರನ್ನು ಕಾನ್ಪುರಕ್ಕೆ ಕರೆಸಿಕೊಂಡು ಅವರಿಗೆ ಅಲ್ಲೊಂದು ಉದ್ಯೋಗ ಕಲ್ಪಿಸಿದರು. ಇವರ ಮಗ ಪ್ರಭಾಕರ ದಾಸ್ ಕಾನ್ಪುರದಲ್ಲಿಯೇ ಓದಿ ಎಂಜೀನಿಯರ್ ಆಗಿ ಅನೇಕ ವರ್ಷ ವಿದೇಶದಲ್ಲಿ ಕೆಲಸ ಮಾಡಿ ಮರಳಿದರು. ಅವರ ಪತ್ನಿ ಡಾ ಸುಜಯ ಪ್ರಭಾಕರ ದಾಸ್ ಖ್ಯಾತ ವೈದ್ಯೆ. ತನ್ನ ತಾಯಿಯ ಅಣ್ಣನ ನೆನಪಿಗೆ ಏನಾದರೂ ಮಾಡಬೇಕೆಂಬ ಮಹತ್ತ್ವಾಕಾಂಕ್ಷೆ ಇದ್ದ ಪ್ರಭಾಕರದಾಸ್ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಿದರು. ಆ ಆಸ್ಪತ್ರೆಯ ಹೆಸರು  ‘ನೇತಾಜಿ ಎಲ್ಲಪ್ಪ ಆಸ್ಪತ್ರೆ’. ಇದನ್ನು ಉದ್ಘಾಟಿಸಲು ಸ್ವತಃ ಕ್ಯಾಪ್ಟನ್ ಲಕ್ಷ್ಮಿಯವರು 1998 ರಲ್ಲಿ ಮಂಗಳೂರಿಗೆ ಬಂದಿದ್ದರು.

ನೇತಾಜಿಯವರ ಜತೆ ಸೇರಿ ಐಎನ್ಎಯಲ್ಲಿ ಕೆಲಸ ಮಾಡಿ ಚರಿತ್ರೆಯಲ್ಲಿ ಇಷ್ಟೊಂದು ಸ್ಮರಣಾರ್ಹ ಸ್ಥಾನ ಪಡೆದರೂ, ಇತರ ಅನೇಕ ಮಹನೀಯರನ್ನು ಮರೆತಂತೆಯೇ ಅತ್ತಾವರ ಎಲ್ಲಪ್ಪನವರನ್ನೂ ನಾಡು ಮರೆತುಬಿಟ್ಟಿರುವುದು ವಿಷಾದದ ಸಂಗತಿ. ‘ಸಹಬಾಳ್ವೆಯ ಸಾಗರ’ ಸಮಾವೇಶದ ಹೊತ್ತಿನಲ್ಲಿ ಇಂಥ ಮಹನೀಯರನ್ನು ಮತ್ತು ಅವರ ತ್ಯಾಗವನ್ನು ಒಂದು ಕ್ಷಣ ನೆನಪಿಸಿಕೊಳ್ಳೋಣ.

--------

share
ಶ್ರೀನಿವಾಸ ಕಾರ್ಕಳ
ಶ್ರೀನಿವಾಸ ಕಾರ್ಕಳ
Next Story
X