ಮುಲ್ಕಿ,: ಮಕ್ಕಳಿಬ್ಬರಿಗೆ ಕುಡಿದ ಮತ್ತಿನಲ್ಲಿ ಅಪರಿಚಿತ ಯುವಕರ ತಂಡದಿಂದ ಗಂಭೀರ ಹಲ್ಲೆ

ಮುಲ್ಕಿ, ಜ.29: ಮಕ್ಕಳಿಬ್ಬರಿಗೆ ಕುಡಿದ ಮತ್ತಿನಲ್ಲಿ ಅಪರಿಚಿತ ಯುವಕರ ತಂಡವೊಂದು ಗಂಭೀರ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು ಮಾರ್ಕೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕೊಲ್ನಾಡು ಮಸೀದಿ ಬಳಿಯ ನಿವಾಸಿಗಳಾದ ಫೈಝಲ್ (15) ಮತ್ತು ನಿಝಾಮ್ ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ಗುರುವಾರ ರಾತ್ರಿ ಸುಮಾರು 8 ಗಂಟೆ ವೇಳೆ ರೈಲು ನಿಲ್ದಾಣದ ಕಡೆಯಿಂದ ಏಕಾಏಕಿ ಮುನ್ನುಗ್ಗಿ ಬಂದ ಗ್ರೇ ಬಣ್ಣದ ಟೂರಿಸ್ಟ್ ಸುಮೋಗ್ರಾಂಡ್ ವಾಹನದಲ್ಲಿ ಮಾರ್ಕೇಟ್ ಬಳಿಯ ಅಂಗಡಿಯ ಕಡೆ ಮುನ್ನುಗ್ಗಿ ಬಂದ ವಾಹನದಲ್ಲಿದ್ದ ಸುಮಾರು 6 ರಿಂದ 7 ಮಂದಿಯಿದ್ದ ದುಷ್ಕರ್ಮಿಗಳ ತಂಡ ಅಂಗಡಿಯೊಂದರ ಮುಂಭಾಗದಲ್ಲಿ ಕುಳಿತಿದ್ದ ಫೈಝಲ್ ಹಾಗೂ ನಿಝಾಮ್ ಎಂಬ ಹುಡುಗರಿಗೆ ಕೈಯಿಂದ ಹಿಗ್ಗಾಮುಗ್ಗ ಥಳಿಸಲಾರಂಭಿಸಿತು ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳು ಕಿನ್ನಿಗೋಳಿ ಸಮೀಪದ ಬಲವಿನಗುಡ್ಡೆಯವರೆಂದು ಸಂಶಯವ್ಯಕ್ತಪಡಿಸಿರುವ ಸ್ಥಳೀಯರು, ತಮಾಶೆ ಮಾಡಿದರು ಎಂದು ಆರೋಪಿಸಿ ಥಳಿಸುತ್ತಿದಂತೆಯೇ " ಬ್ಯಾರಿಗೆ ಹೊಡೆಯುತ್ತಿದ್ದೇವೆ ನೀವೂ ಬನ್ನಿ ಎಂದು" ತುಳುವಿನಲ್ಲಿ ತನ್ನ ಸ್ನೇಹಿತರನ್ನು ಕರೆಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರು ತಕ್ಷಣ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬರುತ್ತಿದ್ದಂತೆಯೇ ಹಲ್ಲೆ ನಡೆಸಿದ ತಂಡ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಭಂದ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸು ಬಂದಿದೆ.





