ಮಂಗಳೂರು : ಅಸಾಧಾರಣ ಸಾಧನೆ ಮಾಡಿದ 4 ರಿಂದ 15 ವರ್ಷದ 8 ಮಕ್ಕಳಿಗೆ ಸನ್ಮಾನ
ಮಂಗಳೂರು ಜನವರಿ 28 : -2015ನ ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿ ಸಾಂಸ್ಕೃತಿಕ, ಕಲೆ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 4 ರಿಂದ 15 ವರ್ಷದ 8 ಮಕ್ಕಳನ್ನು ಜನವರಿ 26 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆಯಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸನ್ಮಾನಿಸಿದರು.
ಸನ್ಮಾನಿತರಿಗೆ ರೂ. 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿಗೆ ಆಯ್ಕೆಯಾದವರು:
1. ಡಿ.ಕೆ ಗೌತಮ್, ಶ್ರೀನಿವಾಸನಗರ, ಸುರತ್ಕಲ್ (ಸಾಂಸ್ಕೃತಿಕ)
2. ಭೂಮಿಕಾ ಪ್ರಿಯದರ್ಶಿನಿ, ಪಣಂಬೂರು, (ಸಾಂಸ್ಕೃತಿಕ)
3. ಸಾತ್ವಿಕ್ ಡಿ. ಅಮೀನ್, ಕುಂಜತ್ ಬೈಲ್ (ಕಲಾಕ್ಷೇತ್ರ),
4. ಪ್ರಥ್ವಿಶ್, ಬನ್ನಡ್ಕ ಬೆಳುವಾಯಿ (ಕಲಾಕ್ಷೇತ್ರ),
5. ಶ್ರೀಲಕ್ಷ್ಮೀ ಪೈ ಎನ್. ಪುತ್ತೂರು( ಶಿಕ್ಷಣ ),
6. ಸಾರ್ಥಕ್ ಶೆಣೈ, ಕೊಟ್ಟಾರ ಚೌಕಿ (ಶಿಕ್ಷಣ),
7. ಮನೋ ಹರ ಪ್ರಭು ಎಂ, ಕೊಟ್ಟಾರ ಕ್ರಾಸ್(ಕ್ರೀಡೆ)
8. ಶಿರಿನ್ ಇನಾಯತ್ ಆಲಿ, ಕುದ್ರೋಳಿ( ಕ್ರೀಡೆ).







