Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ28 Jan 2016 11:12 PM IST
share


ಸಂಪ್ಯ: ಅನುಸ್ಮರಣಾ ಕಾರ್ಯಕ್ರಮ
ಪುತ್ತೂರು, ಜ.28: ಸುನ್ನಿ ಶೂರಾ ಕೌನ್ಸಿಲ್ ಸಂಪ್ಯ ವತಿಯಿಂದತಾಜುಲ್ ಉಲಮಾ ಅನುಸ್ಮರಣೆ ಮತ್ತು ಆಧ್ಯಾತ್ಮಿಕ ತರಗತಿ ಇತ್ತೀಚೆಗೆ ಜರಗಿತು.ಶೈಖುನಾ ಸಂಪ್ಯ ಉಸ್ತಾದ್ ಅಬುಲ್ ಬುಶ್ರಾ ಅಬ್ದುರ್ರಹ್ಮಾನ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಸಖಾಫಿ ಉದ್ಘಾಟಿಸಿದರು. ಕೌನ್ಸಿಲ್‌ನ ಅಧ್ಯಕ್ಷ ಸುಲೈಮಾನ್ ಸಅದಿ ಅಲ್ ಅಫ್‌ಳಲಿ ಹಾಗೂ ಅಬೂಬಕರ್ ಸಖಾಫಿ ಅಜ್ಜಿಕಲ್ ,ಮುಶ್ತಾಕ್ ಕಾಮಿಲ್ ಸಖಾಫಿ ಗೂಡಿನಬಳಿ ದಾವೂದ್ ಝುಹ್ರಿ ಸುರಿಬೈಲು ಉಪಪಸ್ಥಿತರಿದ್ದರು.


 
ಫೆ.2: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಜಾಥಾ 
ಕಾಸರಗೋಡು, ಜ.28: ಆಡಳಿತ ಭಾಷಾ ಮಸೂದೆ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳು ಹಾಗೂ ಸವಲತ್ತುಗಳಿಗೆ ಮಾರಕವಾಗಿ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಕನ್ನಡ ಸಮುದಾಯಗಳ ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನೇತೃತ್ವದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ಆಡಳಿತ ಭಾಷಾ ಮಸೂದೆಯ ವಿರುದ್ಧ ೆ.2ರಂದು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಹೂಡುವರು. ಬೆಳಗ್ಗೆ 9:30ಕ್ಕೆ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಲಿದೆಂದು ಪ್ರಕಟನೆ ತಿಳಿಸಿದೆ.

ಇಂದು ಸೌರ ವಿದ್ಯುಚ್ಛಕ್ತಿ ಉತ್ಪಾದನಾ ಮಾಹಿತಿ ಕಾರ್ಯಾಗಾರ
ಪುತ್ತೂರು, ಜ.28: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶ್ರಯದಲ್ಲಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತದ ಸಹಯೋಗದಲ್ಲಿ ಜ.29ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ‘ಸೌರ ವಿದ್ಯುಚ್ಛಕ್ತಿ ಉತ್ಪಾದನಾ ಮಾಹಿತಿ’ ಕಾರ್ಯಾಗಾರ ಹಮ್ಮಿಕೊಳ್ಳಾಗಿದೆ ಎಂದು ಸಂಘದ ಅಧ್ಯಕ್ಷ ಎಚ್. ಸುಂದರ ಗೌಡ ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಪೂಜಾರಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಹಿತ್ ಜಿ.ಎಸ್ ಮಾಹಿತಿ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಅಧ್ಯಕ್ಷ ಕೇಶವ ಪೈ, ಪ್ರಧಾನ ಕಾರ್ಯದರ್ಶಿ ಗಣೇಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಉಮರ್ ಫಾರೂಕ್, ಖಜಾಂಚಿ ವಿಶ್ವಪ್ರಸಾದ್ ಸೇಡಿಯಾಪು ಮತ್ತು ವ್ಯವಸ್ಥಾಪಕ ವಿಜಯ್ ಉಪಸ್ಥಿತರಿದ್ದರು. 


ನಾಳೆ ಉಡುಪಿಯಲ್ಲಿ ಯತಿ ಸಂಗಮ
 ಉಡುಪಿ, ಜ.28: ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಚಾರಿತ್ರಿಕ ಪಂಚಮ ಪರ್ಯಾಯೋತ್ಸವದಲ್ಲಿ ಜ.30ರಂದು ಸಂಜೆ 5 ಗಂಟೆಗೆ ಕರಾವಳಿ ಜಿಲ್ಲೆಗಳ ಅನೇಕ ಮಠಾಧೀಶರು, ಸ್ವಾಮೀಜಿಗಳು ಶ್ರೀಗಳ ಅಪೇಕ್ಷೆ ಯಂತೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿರುವರು.
ಬಾಳ್ಕುದ್ರು ಶ್ರೀನೃಸಿಂಹಾಶ್ರಮ ಸ್ವಾಮೀಜಿ, ಒಡಿಯೂರು ಶ್ರೀಗುರು ದೇವಾನಂದ ಸ್ವಾಮೀಜಿ, ಕಟಪಾಡಿ ಆನೆಗೊಂದಿ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ಶ್ರೀರಾಜಶೇಖರಾನಂದ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಕಾರ್ಕಳ ಜೈನಮಠದ ಶ್ರೀಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ, ಹೊಸ್ಮಾರು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಕರಿಂಜ ಶ್ರೀ ಮುಕ್ತಾನಂದ ಸರಸ್ವತಿ ಸ್ವಾಮೀಜಿ ಮತ್ತು ಬಾರಕೂರಿನ ಶ್ರೀ ವಿಶ್ವಭಾರತಿ ಸಂತೋಷ್ ಗುರೂಜಿ ಉಪಸ್ಥಿತರಿರುವರು. ಪರ್ಯಾಯ ಶ್ರೀವಿಶ್ವೇಶತೀರ್ಥರು ಅಧ್ಯಕ್ಷತೆ ವಹಿಸಲಿದ್ದು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥರು ಉಪಸ್ಥಿತರಿರುವರು ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.


ಜ.30-31: ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
ಪುತ್ತೂರು, ಜ.28: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇದರ ಆಶ್ರಯದಲ್ಲಿ ದಿ.ಸುನೀಲ್ ಮಸ್ಕರೇನಸ್ ಮತ್ತು ದಿ. ವಿಕ್ರಮ್ ಭಟ್ ಸ್ಮರಣಾರ್ಥ ಜ.30,31ರಂದು ಹೊನಲು ಬೆಳಕಿನ ಆಹ್ವಾನಿತ ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವಕ ಮಂಡಲದ ಗೌರವ ಸಲಹೆಗಾರ ನಿರಂಜನ ರೈ ಮಠಂತಬೆಟ್ಟು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಂತಾರಾಷ್ಟ್ರೀಯ ಆಟಗಾರ, ಪ್ರಶಸ್ತಿ ಪುರಸ್ಕೃತ ದಯಾನಂದ ರೈ ಕೋರ್ಮಂಡ ಅವರನ್ನು ಸನ್ಮಾನಿಸಲಾಗುವುದು ಜ.30ರಂದು ಉದ್ಯಮಿ ಸುನಿಲ್ ಕುಮಾರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ಇನ್‌ಚಾರ್ಜ್ ರೆ.ಫಾ. ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಲಿದ್ದಾರೆ. ಜ.31ರಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ಶಾಸಕಿ ಶಕುಂತಳಾ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಸದಸ್ಯ ಮುಹಮ್ಮದ್ ತ್ವಾಹ, ಕುಕ್ಕುವಳ್ಳಿ ಇಂಟರ್‌ನ್ಯಾಶನಲ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಗೌರವ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ಕಾರ್ಯದರ್ಶಿ ಮುಸ್ತಾಕ್ ಕೋಡಿಂಬಾಡಿ ಉಪಸ್ಥಿತರಿದ್ದರು.


 ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಕಾಲೇಜಿಗೆ ನ್ಯಾಕ್ ಮಾನ್ಯತೆ
ಉಡುಪಿ, ಜ.28: ತಾಲೂಕಿನ ನಿಟ್ಟೆ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್)ನಿಂದ ‘ಎ’ ಗ್ರೇಡ್ ಮಾನ್ಯತೆ ಲಭಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆಗೊಂಡು ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಯುಜಿಸಿಯಿಂದ ಅನುದಾನ ಪಡೆದಿರುವ ಗ್ರಾಮಾಂತರ ಪ್ರದೇಶದ ಈ ಕಾಲೇಜಿನಲ್ಲಿ ಸಹ ಶಿಕ್ಷಣಕ್ಕೆ ಅನುವು ಇದ್ದು ಕಾಲೇಜಿನ ಕಾರ್ಯ ನಿರ್ವಹಣೆಗೆ ಸ್ವಂತ ಹಣಕಾಸು ವ್ಯವಸ್ಥೆ ಇದೆ. ಈ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್(ಬಿಬಿಎಂ), ಬ್ಯಾಚುಲರ್ ಆಫ್ ಕಾಮರ್ಸ್(ಬಿಕಾಂ)-(ಸಾಮಾನ್ಯ ಮತ್ತು ವೊಕೇಶನಲ್) ಹಾಗೂ ಬ್ಯಾಚುಲರ್ ಆಫ್ ಸೈನ್ಸ್ (ಬಿಎಸ್ಸಿ), (ಗಣಿತ,ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್) ಕೋರ್ಸುಗಳನ್ನು ಬೋಧಿಸಲಾಗುತ್ತದೆ.

 ತೋಡಾರು: ಅನುಸ್ಮರಣಾ ಕಾರ್ಯಕ್ರಮ
 ತೋಡಾರು, ಜ.28: ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ವಿದ್ಯಾರ್ಥಿ ಸಂಘಟನೆ ‘ಶಮ್ಸ್’ ವತಿಯಿಂದ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮವು ಶಮ್ಸ್ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಉಸ್ಮಾನುಲ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲ ರಫೀಕ್ ಅಹ್ಮದ್ ಹುದವಿ ಉದ್ಘಾಟಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಯಹ್ಯಾ ದಾರಿಮಿ ಮತ್ತು ರಾಫಿ ಮಾಸ್ಟರ್ ವಯನಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ತನ್ವೀರ್ ಸಜಿಪ ಅವರು ಶೈಖುನಾ ಶಂಸುಲ್ ಉಲಮಾ (ರ) ರ ಜೀವನ ಚರಿತ್ರೆಯನ್ನೂ, ಅಹ್ಮದ್ ನಈಮ್ ಮುಕ್ವೆ ಅವರು ಅಹ್ಮದ್ ರಝ್ಝಖಾನ್(ರ)ರ ಮಾದರಿ ಬದುಕು ಮತ್ತು ಜೀವನ ಸಂದೇಶವನ್ನೂ, ಕಲಂದರ್ ವೇಣೂರುರವರು ಕಣ್ಣಿಯತ್ತ್ ಉಸ್ತಾದ್ (ರ) ರವರ ಆದರ್ಶಮಯ ಬದುಕನ್ನೂ ವಿವರಿಸಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರಿಯಾಝ್ ಚೆನ್ನಾರ್ ಕಿರಾಅತ್ ಪಠಿಸಿದರು. ಶಂಸುಲ್ ಉಲಮಾ ಅರಬಿಕ್ ಕಾಲೇಜು ದುಬೈ ಕಮಿಟಿಯ ಕಾರ್ಯದರ್ಶಿ ಅಶ್ರಫ್ ಸೂರಿಂಜೆಯವರನ್ನು ಸನ್ಮಾನಿಸಲಾಯಿತು. ಸ್ಟೂಡೆಂಟ್ಸ್ ಇಸ್ಲಾಮಿಕ್ ಸೆಲ್‌ನ ಅಧ್ಯಕ್ಷ ಹಾರಿಸ್ ಕುಂತೂರು ಸ್ವಾಗತಿಸಿದರು. ಕಬೀರ್ ಅಜ್ಜಾವರ ವಂದಿಸಿದರು.


   ಜ.31: ಪೊಯ್ಯತ್ತಬೈಲು ಎಸ್ಕೆಎಸ್ಸೆಸ್ಸೆಫ್ ಸಮ್ಮೇಳನ 
ಮಂಜೇಶ್ವರ, ಜ.28: ಎಸ್ಕೆಎಸ್ಸೆಸ್ಸೆಫ್ ಪೊಯ್ಯತ್ತಬೈಲ್ ಶಾಖಾ ವತಿಯಿಂದ ಸಮಸ್ತ 90ನೆ ವಾರ್ಷಿಕೋತ್ಸವದ ಪ್ರಚಾರ ಸಮ್ಮೇಳನ ಪೊಯ್ಯತ್ತಬೈಲಿನ ಅಡಕಳಕಟ್ಟೆಯಲ್ಲಿ ಜ.31ರಂದು ಸಂಜೆ 3:30ಕ್ಕೆ ನಡೆಯಲಿದೆ. ಪೊಯ್ಯತ್ತಬೈಲ್ ಮಖಾಂ ಝಿಯಾರತ್ತಿನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮಖಾಂ ಝಿಯಾರತ್‌ಗೆ ಇಬ್ರಾಹೀಂ ಬಾತಿಷಾ ತಂಙಳ್ ಆನೆಕಲ್ಲು ನೇತೃತ್ವ ನೀಡಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ 4 ಗಂಟೆಗೆ ಪಯ್ಯಕ್ಕಿ ಅಕಾಡಮಿ ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ನಡೆಯಲಿದೆ. ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಪ್ರಾರ್ಥನೆಗೆ ನೇತೃತ್ವ ನೀಡಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ. ಅಹ್ಮದ್ ಮುಸ್ಲಿಯಾರ್ ಪಾತೂರು ಉಸ್ತಾದ್ ವಹಿಸಲಿದ್ದು, ಉದ್ಘಾಟನೆಯನ್ನು ಪಾಣಕ್ಕಾಡ್ ಶಮೀರ್ ಅಲಿ ಶಿಹಾಬ್ ತಂಙಳ್ ನೆರವೇರಿಸಲಿದ್ದಾರೆ. ನ್ಯಾಯವಾದಿ ಹನೀಫ್ ಹುದವಿ ಕೇರಳ ಮುಖ್ಯಪ್ರಭಾಷಣವನ್ನು ನಡೆಸಲಿದ್ದಾರೆ.
  ವೇದಿಕೆಯಲ್ಲಿ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಪಯ್ಯಕ್ಕಿ ಪಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್, ಮುಹಿಯುದ್ದೀನ್ ಅಝ್‌ಹರಿ ಕಡಂಬಾರ್, ಖಾಸಿಮ್ ದಾರಿಮಿ ಕಿನ್ಯ, ಮುಹಮ್ಮದ್ ಫೈಝಿ ಕಜೆ, ಶಾಸಕ ಪಿ.ಬಿ. ಅಬ್ದುರ್ರಝಾಕ್, ಕಾಸರಗೋಡು ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್, ವರ್ಕಾಡಿ ಗ್ರಾಪಂ ಅಧ್ಯಕ್ಷ ಮಜೀದ್ ಬಿ.ಎ. ಪಾತೂರು, ಕಾಸರಗೋಡು ಜಿಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ, ವರ್ಕಾಡಿ ಗ್ರಾಪಂ ಸದಸ್ಯ ಹಾರಿಸ್ ಪಾವೂರು, ಮೀಂಜ ಗ್ರಾಪಂ ಸದಸ್ಯ ವಹೀದ್ ಕೂಡೇಲ್, ಮೀಂಜ ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಕುಂಞಿ, ಮೀಂಜ ಗ್ರಾಪಂ ಮಾಜಿ ಅಧ್ಯಕ್ಷ ಬಿ. ಮುಹಮ್ಮದ್ ಕುಂಞಿ, ಪಿ.ಬಿ. ಅಬೂಬಕರ್, ಅಬ್ದುಲ್ ಖಾದರ್ ಗಾಂಧಿನಗರ, ಇಬ್ರಾಹೀಂ ಕೊಂಬಂಗುದಿ, ಇಸ್ಮಾಯೀಲ್ ಮಚ್ಚಂಪಾಡಿ ಮತ್ತು ಅಬ್ದುಲ್ ಖಾದರ್ ಯಮಾನಿ ಪೊಯ್ಯತ್ತಬೈಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಕೋಟದಲ್ಲಿ ಜೇನುಕೃಷಿ ತರಬೇತಿ
ಉಡುಪಿ, ಜ.28: ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ಕೋಟ ಗ್ರಾಪಂಗಳ ಜಂಟಿ ಆಶ್ರಯದಲ್ಲಿ ಜೇನುಕೃಷಿ ತರಬೇತಿ ಕಾರ್ಯಕ್ರಮ ಕೋಟದ ಸರಕಾರಿ ಸಂಯುಕ್ತ ಪ್ರೌಢಶಾಲೆ ಮೂಡು ಗಿಳಿಯಾರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಸೋಮಶೇಖರ್ ಶೆಟ್ಟಿ, ಕೃಷಿ ಚಟುವಟಿಕೆಗಳೊಂದಿಗೆ ಜೇನು ಕೃಷಿ ಕೂಡ ಉಪಕಸುಬಾಗಿದ್ದು, ಅಲ್ಪಬಂಡವಾಳದಿಂದ ಹೆಚ್ಚು ಆದಾಯಗಳಿಸಲು ಸಾಧ್ಯವಾಗುವ ವೃತ್ತಿಯಾಗಿದೆ ಎಂದರು.ಶಿಕ್ಷಕ ಜಿ.ಬಿ.ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಜೇನು ಕೃಷಿಕರಾದ ಪಿ.ಲಕ್ಷಣ ನಾಯ್ಕ, ಗೋಪಾಲ ಹಾಗೂ ಹುಣ್ಸೆಮಕ್ಕಿಯ ನಿವೃತ್ತ ಶಿಕ್ಷಕ ಸಚ್ಚಿದಾನಂದ ತರಬೇತುದಾರರಾಗಿ ಭಾಗವಹಿಸಿ ಜೇನುಕೃಷಿಯ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಛಾಯಾ ವೈ ಚಂದಾವರ್ ಉಪಸ್ಥಿತರಿದ್ದರು. ಉಡುಪಿ ಜಿಪಂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಸ್. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭವು ಶಾಲೆಯ ಮುಖ್ಯ ಶಿಕ್ಷಕ ಶಿವರಾಮ್ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ತಾಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯೆ ಶಶಿಕಲಾ, ರೈತ ಸಂಪರ್ಕ ಕೇಂದ್ರ ಉಡುಪಿ ಮತ್ತು ಸಹಾಯಕ ತೋಟಗಾರಿಕಾ ಅಧಿಕಾರಿ (ಪ್ರಭಾರ) ಎಸ್. ದೀಪಾ ಉಪಸ್ಥಿತರಿದ್ದರು.

ಉಡುಪಿ: ಜ್ಞಾನಯಜ್ಞ ಮಾಲಿಕೆ ಉದ್ಘಾಟನೆ 
ಉಡುಪಿ, ಜ.28: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನಡೆಯುವ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಪ್ರವಚನ ಮಾಲಿಕೆಯನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬುಧವಾರ ರಾಜಾಂಗಣದಲ್ಲಿ ಉದ್ಘಾಟಿಸಿದರು. ಈ ಸಂದರ್ಭ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಪೇಜಾವರ ಮಠದ ಕಿರಿಯ ಶ್ರೀಪಾದರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಬನ್ನಂಜೆ ಶ್ರೀಶನೀಶ್ವರ ದೇವಸ್ಥಾನದ ಶ್ರೀರಾಘವೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮಠದ ದಿವಾನರಾದ ರಘುರಾಮಾಚಾರ್ಯ ಸ್ವಾಗತಿಸಿದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮೊದಲ ಪ್ರವಚನ ಮಾಲಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ತಿರುಮಲೆ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X