ಟಿಕೆಟ್ ಆಕಾಂಕ್ಷಿಪರ ಗ್ರಾಮಸ್ಥರ ಮೆರವಣಿಗೆ
ಹಾಸನ, ಜ.28: ಮುಂಬರುವ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಆಕಾಂಕ್ಷಿ ಪರ ಗ್ರಾಮಸ್ಥರು ನಗರದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಶಾಂತಿಗ್ರಾಮ ಹೋಬಳಿಯ ಬಜುಮಾರನಹಳ್ಳಿಯ ನೂರಾರು ಜನ ಗ್ರಾಮಸ್ಥರು ಗ್ರಾಮದ ಮಲ್ಲೇಶ್ ಎಂಬವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ, ನಗರದ ರೈಲ್ವೆ ನಿಲ್ದಾಣ ಬಳಿಯಿಂದ ಬಿ.ಎಂ. ರಸ್ತೆಯಲ್ಲಿ ಮೆರವಣಿಗೆ ಮೂಲಕ ಕಾಂಗ್ರೆಸ್ ಕಚೆೇರಿಗೆ ತೆರಳಿದರು.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಅವಕಾಶ ಕಲ್ಪಿಸುವಂತೆ ಇದೆ ವೇಳೆ ಅಭ್ಯರ್ಥಿ ಪರ ಘೋಷಣೆ ಕೂಗಲಾಯಿತು.
Next Story





