ಉಪ್ಪಿನಂಗಡಿ: ವಧುವರರ ಕುಟುಂಬಗಳಿಗೆ ಚೆಕ್ ವಿತರಣೆ
ಉಪ್ಪಿನಂಗಡಿ, ಜ.28: ನಾವು ಗಳಿಸಿದ ಸಂಪತ್ತಿನ ಒಂದು ಪಾಲನ್ನು ಸಮಾಜಕ್ಕೆಂದು ಮೀಸಲಿಟ್ಟಾಗ ಸಮಾಜ ಉದ್ಧಾರವಾಗುವುದರೊಂದಿಗೆ ದೀನ ದಲಿತರ ಮುಖದಲ್ಲಿ ನಗು ಕಾಣಲು ಸಾಧ್ಯ ಎಂದು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ತಿಳಿಸಿದರು.
ಕುಂತೂರಿನ ಮುಡಿಪಿನಡ್ಕದ ಬೇಳ್ಪಾಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.14ರಂದು ನಡೆಸಲುದ್ದೇಶಿಸಿರುವ 5 ಜೋಡಿ ವಧು-ವರರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮದುವೆ ಪೂರ್ವ ಖರ್ಚಿಗಾಗಿ ವಧು ವರರ ಕುಟುಂಬಗಳಿಗೆ ಚೆಕ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಟ್ರಸ್ಟ್‌ನ ಸಂಚಾಲಕ ಅಬ್ಬಾಸ್ ಕುಂತೂರು ಮಾತನಾಡಿ, ಫೆ.14ರಂದು ಟ್ರಸ್ಟಿ ಮುಹಮ್ಮದ್ ಸಫ್ವಾನ್‌ರ ವಿವಾಹವಿದ್ದು, ಈ ಸಂದರ್ಭ 5 ಜೋಡಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುವುದು ಎಂದರು.
ವೇದಿಕೆಯಲ್ಲಿ ಪೆರಾಬೆ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ರೈ, ದ.ಕ. ಜಿಲ್ಲಾ ಇಂಟಕ್‌ನ ಕೋಶಾಧಿಕಾರಿ ಸಿದ್ದೀಕ್ ಮೇದರಬೆಟ್ಟು, ಪೆರಾಬೆ ಗ್ರಾಪಂ ಸದಸ್ಯ ಅನೀಶ್, ನೆಕ್ಕರೆ ಜಮಾಅತ್ ಅಧ್ಯಕ್ಷ ಅಬ್ದುಲ್ ಕುಂಞಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಅಬೂಬಕರ್, ಟ್ರಸ್ಟ್ ನಿರ್ದೇಶಕರಾದ ಅಬ್ದುಲ್ಲ ಕುಂಞಿ, ಮುಹಮ್ಮದ್ ಸಫ್ವಾನ್, ನಾಸಿರ್ ಪಯ್ಯನೂರು, ಪುತ್ತುಮೋನು, ಇಬ್ರಾಹೀಂ ಮತ್ತಿತರರು ಉಪಸ್ಥಿತರಿದ್ದರು.ಟ್ರಸ್ಟ್‌ನ ಸಂಚಾಲಕ ನಝೀರ್ ಕೊಲ ಹಾಗೂ ಅಬ್ಬಾಸ್ ಕುಂತೂರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಮೊಂಟೆಪದವು: ಅನುಸ್ಮರಣೆ





