ಜಿಲ್ಲೆಯ ಹಲವೆಡೆ ಗಣರಾಜ್ಯೋತ್ಸವ ಆಚರಣೆ

ದೇರಳಕಟ್ಟೆ: ಜಂ ಇಯ್ಯತುಲ್ ಮುಅಲ್ಲಿಮೀನ್, ಎಸ್ಕೆಎಸ್‌ಬಿವಿ ಇದರ ವತಿಯಿಂದ ದೇರಳಕಟ್ಟೆಯ ಸಿಟಿ ಗ್ರೌಂಡ್‌ನಲ್ಲಿ ಸಚಿವ ಯು.ಟಿ. ಖಾದರ್ ಧ್ವಜಾರೋಹಣಗೈದರು. ಈ ಸಂದರ್ಭ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಸುರೇಶ್ ಬಿ. ಶೆಟ್ಟಿ, ಕಿನ್ಯ ಗ್ರಾಪಂ ಸದಸ್ಯ ಮಹಾಬಲ ಪೂಂಜಾ, ಬೆಳ್ಮ ಗಾಪಂ ಸದಸ್ಯ ಕಬೀರ್ ಡಿ., ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯೀಲ್, ಅಧ್ಯಕ್ಷ ಅಬೂಬಕರ್, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಫಾರೂಕ್ ಕಲ್ಲಡ್ಕ, ಶಂಸುಲ್ ಉಲಮಾ ಇಸ್ಲಾಮಿಕ್ ದೇರಳಕಟ್ಟೆ ಅಧ್ಯಕ್ಷ ಅಹ್ಮದ್ ಸಿರಾಜ್ ತಾಜ್, ಮುಹಮ್ಮದ್ ಪನೀರ್, ಲತೀಫ್ ದಾರಿಮಿ, ಫಾರೂಕ್ ದಾರಿಮಿ, ಯಾಸರ್ ಅರಾಫತ್, ಕೆ.ಯು. ಖಲೀಲ್, ರಹ್ಮಾನ್ ಅರ್ಷದಿ ಉಪಸ್ಥಿತರಿದ್ದರು. ಫಲಾಹ್ ವಿದ್ಯಾಸಂಸ್ಥೆ: ತಲಪಾಡಿಯ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ಬಾಸ್ ಮಜಲ್ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ಕಾರ್ಯದರ್ಶಿ ಹಾಜಿ ಎನ್.ಅರಬಿ ಕುಂಞಿ, ಕೋಶಾಧಿಕಾರಿ ಹಾಜಿ ಇಸ್ಮಾಯೀಲ್ ನಾಗತೋಟ, ಸದಸ್ಯರಾದ ಡಾ.ಅಬ್ದುಲ್ ಖಾದರ್, ಅಹ್ಮದ್ ಬಾವ, ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾ.ಎಂ., ಕನ್ನಡ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಮುಹಮ್ಮದ್ ರಫೀಕ್ ಕೆ.ಉಪಸ್ಥಿತರಿದ್ದರು.
ಸೈಂಟ್ ಜೋಸೆಫ್ ಸ್ಕೂಲ್: ವಾಮಂಜೂರಿನ ಸೈಂಟ್ ಜೋಸೆಫ್ ಸ್ಕೂಲ್ನಲ್ಲಿ ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ಕ್ಷೇತ್ರ ಸಮಿತಿ ಅಧ್ಯಕ್ಷ ಎ.ಅಶ್ರಫ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಲೆನಿಟಾ, ಮಾಜಿ ಗ್ರಾಪಂ ಅಧ್ಯಕ್ಷ ಅಲಿಯಬ್ಬ ಉಪಸ್ಥಿತರಿದ್ದರು.
ಅಜ್ಜಿಬೆಟ್ಟು ಶಾಲೆ: ಬಿ.ಸಿ.ರೋಡು ಸಮೀಪದ ಅಜ್ಜಿಬೆಟ್ಟು ಶಾಲೆಯಲ್ಲಿ ಬಿ.ಮೂಡ ಸರಕಾರಿ ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಾ. ರಮೇಶಾನಂದ ಸೋಮಾಯಾಜಿ ಧ್ವಜಾರೋಹಣಗೈದರು.
ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷ ಕರುಣಾಕರ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕುಲಾಲ್, ಉಪಾಧ್ಯಕ್ಷ ಬಿ.ಶ್ರೀಧರ ಅಮೀನ್ ಉಪಸ್ಥಿತರಿದ್ದರು.





