ಪಾಕ್‌ನ ಟೆಸ್ಟ್ ಆರಂಭಿಕ ದಾಂಡಿಗ ಫರ್ಹತ್ ನಿವೃತ್ತಿ

ಕರಾಚಿ, ಜ.28: ಮುಂಬರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್‌ನಲ್ಲಿ (ಎಂಸಿಎಲ್) ಪಾಲ್ಗೊಳ್ಳುವ ಉದ್ದೇಶದಿಂದ ಪಾಕಿಸ್ತಾನದ ಟೆಸ್ಟ್ ತಂಡದ ಆರಂಭಿಕ ದಾಂಡಿಗ ಇಮ್ರಾನ್ ಫರ್ಹತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.
ಬಹು ನಿರೀಕ್ಷಿತ ಮಾಜಿ ಆಟಗಾರರೇ ಭಾಗವಹಿಸುತ್ತಿರುವ ಎಂಸಿಎಲ್ ಶುಕ್ರವಾರ ದುಬೈನಲ್ಲಿ ಆರಂಭವಾಗಲಿದೆ.
ಬುಧವಾರ ಪಾಕಿಸ್ತಾನ ಕ್ರಿಕೆಟ್‌ಮಂಡಳಿಯ ಅಧಿಕಾರಿಗಳನ್ನು ಭೇಟಿಯಾಗಿರುವ 33ರ ಹರೆಯದ ಎಡಗೈ ದಾಂಡಿಗ ಫರ್ಹತ್ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ್ದರು. ಪಿಸಿಬಿಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ(ಎನ್‌ಒಸಿ) ಪಡೆದಿದ್ದಾರೆ.
ಫರ್ಹತ್ 2013ರಲ್ಲಿ ಕೊನೆಯ ಬಾರಿ ಪಾಕಿಸ್ತಾನ ತಂಡದಲ್ಲಿ ಆಡಿದ್ದರು. ಫರ್ಹತ್ ಪಾಕ್ ಪರ 40 ಟೆಸ್ಟ್, 58 ಏಕದಿನ ಹಾಗೂ 7 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.
ಫರ್ಹತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 12,669 ರನ್ ಗಳಿಸಿರುವ ಹೊರತಾಗಿಯೂ ಫೆಬ್ರವರಿಯಲ್ಲಿ ನಡೆಯಲಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಹಾಗೂ ಎಂಸಿಎಲ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ.
ಪಾಕ್‌ನ ಅಬ್ದುಲ್ ರಝಾಕ್, ಸಲೀಮ್ ಇಲಾಹಿ, ಮುಹಮ್ಮದ್ ಯೂಸುಫ್, ಸಕ್ಲೇನ್ ಮುಶ್ತಾಕ್, ರಾನಾ ನಾವೇದ್, ತೌಫೀಖ್ ಉಮರ್, ಯಾಸಿರ್ ಹಾಮೀದ್, ಮುಶ್ತಾಕ್ ಅಹ್ಮದ್, ಅಝರ್ ಮಹಮೂದ್, ಹಸನ್ ರಾಝಾ, ಹುಮಾಯೂನ್ ಫರ್ಹತ್ ಹಾಗೂ ಮುಹಮ್ಮದ್ ಖಲೀಲ್ ಈಗಾಗಲೇ ಎಂಸಿಎಲ್‌ಗೆ ಸೇರ್ಪಡೆಯಾಗಿದ್ದಾರೆ.







