ಭಾರತ ವಿರುದ್ಧ ಟ್ವೆಂಟಿ-20 ಸರಣಿ: ಲಂಕಾ ತಂಡ ಪ್ರಕಟ

ಕೊಲಂಬೊ, ಜ.28: ಭಾರತದ ವಿರುದ್ಧ ಫೆ.9ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಶ್ರೀಲಂಕಾ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಹಿರಿಯ ಬೌಲರ್ ದಿಲ್ಹರ ಫೆರ್ನಾಂಡೊ 4 ವರ್ಷಗಳ ಬಳಿಕ ತಂಡಕ್ಕೆ ವಾಪಸಾಗಿ ಅಚ್ಚರಿ ಮೂಡಿಸಿದ್ದಾರೆ.
ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ, ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯುಸ್, ನುವಾನ್ ಕುಲಸೇಖರ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಭಾರತ-ಲಂಕಾ ನಡುವಿನ ಟ್ವೆಂಟಿ-20 ಫೆ.9 ರಂದು ಪುಣೆಯಲ್ಲಿ ಆರಂಭವಾಗಲಿದ್ದು, ದಿಲ್ಲಿ(ಫೆ.22) ಹಾಗೂ ವಿಶಾಖಪಟ್ಟಣ(ಫೆ.14)ದಲ್ಲಿ ಇನ್ನೆರಡು ಪಂದ್ಯಗಳು ನಡೆಯಲಿವೆ.
ಶ್ರೀಲಂಕಾ ಟ್ವೆಂಟಿ-20 ತಂಡ:
ದಿನೇಶ್ ಚಾಂಡಿಮಲ್(ನಾಯಕ), ತಿಲಕರತ್ನೆ ದಿಲ್ಶನ್, ಸೀಕುಗೆ ಪ್ರಸನ್ನ, ಮಿಲಿಂದ ಸಿರಿವರ್ಧನ, ಡಿ. ಗುಣತಿಲಕ, ತಿಸರ ಪೆರೇರ, ಡಿ. ಶನಕ, ಎ. ಗುಣರತ್ನೆ, ಚಾಮರಾ ಕಪುಗಡೆರಾ, ಡಿ. ಚಾಮೀರ, ದಿಲ್ಹರ ಫೆರ್ನಾಂಡೊ, ಕಸುನ್ ರಜಿತ, ಬಿ. ಫೆರ್ನಾಂಡೊ, ಸಚಿತ್ರ ಸೇನನಾಯಕೆ, ಜೆಫ್ರೆ ವ್ಯಾಂಡರ್‌ಸೆ.
Next Story





