ಕಿವೀಸ್-ಪಾಕ್ 2ನೆ ಏಕದಿನ ಮಳೆಗಾಹುತಿ
ನೇಪಿಯರ್, ಜ.28: ಭಾರೀ ಮಳೆಯ ಕಾರಣ ಆತಿಥೇಯ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನದ ನಡುವೆ ಗುರುವಾರ ಇಲ್ಲಿ ನಡೆಯಬೇಕಾಗಿದ್ದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ.
ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ರವಿವಾರ ನಡೆಯಲಿರುವ ಮೂರನೆ ಹಾಗೂ ಅಂತಿಮ ಪಂದ್ಯವನ್ನು ಜಯಿಸಿ ಸರಣಿ ಸಮಬಲಗೊಳಿಸುವ ಅವಕಾಶ ಲಭಿಸಿದೆ. ಪಾಕ್ ಮೊದಲ ಏಕದಿನ ಪಂದ್ಯವನ್ನು 70 ರನ್‌ಗಳ ಅಂತರದಿಂದ ಸೋತಿತ್ತು.
ಭಾರೀ ಮಳೆಯಿಂದಾಗಿ ಮೈದಾನ ಒದ್ದೆಯಾಗಿತ್ತು. ಹಲವು ಬಾರಿ ಪಿಚ್ ಪರೀಕ್ಷೆ ನಡೆಸಿದ ಅಂಪೈರ್‌ಗಳು ಅಂತಿಮವಾಗಿ ಪಂದ್ಯ ರದ್ದುಪಡಿಸಲು ನಿರ್ಧರಿಸಿದರು.
Next Story





