ಗಾಂಜಾ ಮಾರಾಟ: ಓರ್ವನ ಸೆರೆ
ಮಲ್ಪೆ, ಜ.28: ಮಲ್ಪೆ ಬೀಚ್‌ನ ಹೊಸ ಸ್ನಾನಗೃಹದ ಬಳಿ ಜ.27ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಕ್ಕಿಕಟ್ಟೆಯ ಇಮ್ತಿಯಾಝ್ ಖಾನ್(29) ಎಂದು ಗುರುತಿಸಲಾಗಿದೆ. ಈತನಿಂದ ಒಟ್ಟು 100 ಗ್ರಾಂ ಗಾಂಜಾ, 1 ಮೊಬೈಲ್, 1000ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





