ಪಾನ ನಿಷೇಧ ವಿರೋಧಿಸಿ ನಿತೀಶ್‌ರತ್ತ ಶೂ ಬಾಣ!
ಪಾಟ್ನಾ, ಜ.28: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಮೇಲೆ ಗುರುವಾರ ವ್ಯಕ್ತಿಯೊಬ್ಬ ಶೂ ಒಂದನ್ನು ಎಸೆದಿದ್ದು, ಅದು ಉದ್ದೇಶಿತ ಗುರಿ ತಲುಪಲು ವಿಫಲವಾಗಿದೆ.
ಬಿಹಾರದಲ್ಲಿ ಎ.1ರಿಂದ ಪಾನ ನಿಷೇಧ ಜಾರಿಯಾಗಲಿದೆಯೆಂದು ನಿತೀಶ್ ಪುನರುಚ್ಚರಿಸಿದ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಪಾಟ್ನಾದ ಬಖ್ತಿಯಾರ್‌ಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯ ಮೇಲೆ ಶೂ ಎಸೆಯಲು ಯತ್ನಿಸಿದನು. ಎಪ್ರಿಲ್ 1 ರಿಂದ ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧಕ್ಕೆ ತಾನು ಬದ್ಧನೆಂದು ಅವರು ಪ್ರಕಟಿಸಿದಾಗ ಈ ಘಟನೆ ನಡೆಯಿತು ವ್ಯಕ್ತಿಯೊಬ್ಬ ಮುಖ್ಯಮಂತ್ರಿಯತ್ತ ಶೂ ಎಸೆದು ಅದನ್ನು ಪ್ರತಿಭಟಿಸಿದನೆಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Next Story





