ಗುಜರಾತಿನ ವಿವಾದಾತ್ಮಕ ಭಯೋತ್ಪಾದನೆ ನಿಗ್ರಹ ಮಸೂದೆ ಹಿಂದಕ್ಕೆ
ಹೊಸದಿಲ್ಲಿ,,ಜ.28: ಗುಜರಾತ್ ವಿಧಾನಸಭೆಯು ಅಂಗೀಕರಿಸಿರುವ ಮತ್ತು ಈ ಹಿಂದೆ ಇಬ್ಬರು ರಾಷ್ಟ್ರಪತಿಗಳಿಂದ ತಿರಸ್ಕರಿಸಲ್ಪಟ್ಟಿದ್ದ ವಿವಾದಾತ್ಮಕ ಭಯೋತ್ಪಾದನೆ ನಿಗ್ರಹ ಮಸೂದೆಯನ್ನು ಗೃಹ ಸಚಿವಾಲಯವು ಹಿಂದೆಗೆದುಕೊಂಡಿದೆ. ನಾಲ್ಕು ತಿಂಗಳ ಹಿಂದೆ ನರೇಂದ್ರ ಮೋದಿ ಸರಕಾರವು ಗುಜರಾತ್ ಭೀತಿವಾದ ಮತ್ತು ಸಂಘಟಿತ ಅಪರಾಧಗಳ ನಿಯಂತ್ರಣ ಮಸೂದೆಗೆ ಹಸಿರು ನಿಶಾನೆಯನ್ನು ತೋರಿಸಿದ ಬಳಿಕ ಅದನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಒಪ್ಪಿಗೆಗಾಗಿ ರವಾನಿಸಿತ್ತು.
2003ರಲ್ಲಿ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಮಂಡಿಸಲಾಗಿದ್ದ ಈ ಮಸೂದೆಯನ್ನು ರಾಜ್ಯ ವಿಧಾನಸಭೆಯು 12 ವರ್ಷಗಳಲ್ಲಿ ನಾಲ್ಕನೆ ಬಾರಿಗೆ ಕಳೆದ ವರ್ಷದ ಮಾರ್ಚ್‌ನಲ್ಲಿ ಅಂಗೀಕರಿಸಿತ್ತು. 2004ರಲ್ಲಿ ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮತ್ತು 2008ರಲ್ಲಿ ಪ್ರತಿಭಾ ಪಾಟೀಲ್ ಅವರು ಈ ಮಸೂದೆಯನ್ನು ವಾಪಸ್ ಕಳುಹಿಸಿದ್ದರು.
Next Story





