ಕಾಸರಗೋಡು: ಯುವಕನ ಕೊಲೆಗೆ ಯತ್ನ
ಕಾಸರಗೋಡು : ಯುವಕನೋರ್ವನ ಕೊಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಉಪ್ಪಳದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಉಪ್ಪಳ ಪ್ರತಾಪನಗರದ ತಳಂಗರೆ ಅಚ್ಚು ( 35) ಎಂಬಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಚ್ಚು ಹಲವು ಕ್ರಿಮಿನಲ್ ಪ್ರಕರಣ ಆರೋಪಿ ಎನ್ನಲಾಗಿದೆ. ಉಪ್ಪಳ ಪೇಟೆಯ ವಿವಾಹ ಹಾಲ್ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ರಮೀದ್ ಎಂಬಾತ ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದು , ಗಂಭೀರ ಗಾಯಗೊಂಡ ಅಚ್ಚುನನ್ನು ಉಪ್ಪಳ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಕುಂಬಳೆ ಠಾಣೆ ಸಬ್ ಇನ್ಸ್ ಪೆಕ್ಟರ್ ಕೆ. ಪಿ ಸುರೇಶ್ ಬಾಬು, ಮಂಜೇಶ್ವರ ಟಾಣಾ ಸಬ ಇನ್ಸ್ ಪೆಕ್ಟರ್ ಪ್ರಮೋದ್ ನೇತ್ರತ್ವದ ಪೋಲಿಸ ತಂಡ ತನಿಖೆ ಆರಂಬಿಸಿದೆ . ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
Next Story





