ಸ್ಮಾರ್ಟ್ ಸಿಟಿ; ಪುಣೆ, ವಿಶಾಖಪಟ್ಟಣಕ್ಕೆ ವಿದೇಶಿ ನೆರವು ಭಾಗ್ಯ
.jpg)
ಹೊಸದಿಲ್ಲಿ, ಜ.29: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ಕನಸಿನ ಯೋಜನೆ ಸ್ಮಾರ್ಟ್ ಸಿಟಿ ನಿರ್ಮಾಣದ ಹೋಜನೆಗೆ ಮೊದಲ ಹಂತದಲ್ಲಿ 20 ನಗರಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಪುಣೆ ಮತ್ತು ವಿಶಾಖಪಟ್ಟಣಕ್ಕೆ ವಿದೇಶದಿಂದ ನೆರವು ಹರಿದು ಬರಲಿದೆ.
ಪುಣೆ ನಗರಕ್ಕೆ ಫ್ರಾನ್ಸ್ ಮತ್ತು ಪೋರ್ಟ್ ಸಿಟಿ ವಿಶಾಖಪಟ್ಟಣದ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಮೆರಿಕ ನೆರವು ಒದಗಿಸಲಿದೆ.
ಅಮೆರಿಕವು ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಣಾಶಿಯ ಅಭಿವೃದ್ಧಿಗೆ ಆಸಕ್ತಿ ವಹಿಸಿತ್ತು. ಉತ್ತರ ಪ್ರದೇಶದ ಯಾವುದೇ ನಗರ ಪಟ್ಟಿಯಲ್ಲಿ ಸೇರದಿರುವುದು ವಿಶೇಷ. ಫ್ರಾನ್ಸ್ ದೇಶವು ಪುದುಚೇರಿ ನಗರದ ಅಭಿವೃದ್ಧಿಗೆ ಕೈ ಜೋಡಿಸಲು ಆಸಕ್ತಿ ತೋರಿಸಿದೆ,
ಫ್ರಾನ್ಸ್ ಮತ್ತು ಅಮೆರಿಕ ದೇಶಗಳಂತೆ ಜರ್ಮನಿ, ಚೀನಾ ಮತ್ತು ಸ್ವೀಡನ್ ದೇಶಗಳು ಭಾರತದ ನಗರಗಳ ಅಭಿವೃದ್ಧಿಗೆ ನೆರವು ನೀಡಲು ಮುಂದೆ ಬಂದಿವೆ. ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಸೇರಲು ನಗರಗಳು ಮುಂದಿನ 2017ರ ತನಕ ಕಾಯಬೇಕಾಗಿದೆ.
Next Story





