ಅಜ್ಜರಕಾಡು ಆಸ್ಪತ್ರೆಯ ಅವ್ಯವಸ್ಥೆ ವಿರೋಧಿಸಿ ಧರಣಿ

ಉಡುಪಿ: ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ಆಸ್ಪತ್ರೆಯ ಎದುರು ವೌನ ಪ್ರತಿಭಟನೆ ನಡೆಸಿತು.
ಸಂಜೆ ವರೆಗೆ ನಡೆದ ಧರಣಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಮುಖಂಡರಾದ ಚಂದ್ರಿಕಾ ಶೆಟ್ಟಿ, ರವಿಶಾಸ್ತ್ರಿ ಬನ್ನಂಜೆ, ಪ್ರವೀಣ್ ಹಿರಿಯಡ್ಕ, ಸುರೇಶ್ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಇದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಮುಂದೆ ಉಪ ವಾಸ ಸತ್ಯಾಗ್ರಹ, ಉಡುಪಿ ಜಿಲ್ಲಾ ಬಂದ್ ಸಹಿತ ಉಗ್ರ ಹೋರಾಟ ನಡೆಸ ಲಾಗುವುದು ಎಂದು ರವಿ ಶೆಟ್ಟಿ ಎಚ್ಚರಿಕೆ ನೀಡಿದರು.
Next Story





