" ವಾರ್ತಾಭಾರತಿ " ಪ್ರಧಾನ ಕಚೇರಿಗೆ ಟೀಸ್ಟಾ ಸೆಟಲ್ವಾದ್ ಭೇಟಿ

ಮಂಗಳೂರು: ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ, ಪತ್ರಕರ್ತೆ ಟೀಸ್ಟಾ ಸೆಟಲ್ವಾದ್ ಅವರು ಶುಕ್ರವಾರ ಮಧ್ಯಾಹ್ನ ಮಂಗಳೂರಿನ " ವಾರ್ತಾಭಾರತಿ " ಪ್ರಧಾನ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ ಅವರು ಪತ್ರಿಕಾ ಬಳಗದೊಂದಿಗೆ ಮುಕ್ತವಾಗಿ ಬೆರೆತರು. ಜಾತ್ಯತೀತತೆ ಹಾಗು ಮಾನವ ಹಕ್ಕುಗಳ ಸಂರಕ್ಷಣೆಯ ಹಾದಿಯಲ್ಲಿ " ವಾರ್ತಾಭಾರತಿ " ಮಾದರಿ ಕೆಲಸ ಮಾಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದರು.
" ವಾರ್ತಾಭಾರತಿ "ಯ ಮಂಗಳೂರು ಬ್ಯೂರೊ ಮುಖ್ಯಸ್ಥ ಪುಸ್ಪರಾಜ್ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಕೆ. ಎಲ್. ಅಶೋಕ್ , ಉಮರ್ ಯು.ಎಚ್. ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Next Story





