ವಿಷ್ಣು ರೂಪ ವಿವಾದ: ಧೋನಿ ವಿರುದ್ಧ ಯಾವುದೇ ಕಾನೂನು ಪ್ರಕ್ರಿಯೆಗೆ ಸುಪ್ರೀಮ್ ತಡೆ

ಹೊಸದಿಲ್ಲಿ, ಜ.29: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಜಾಹೀರಾತಿನ ಫೋಟೊದಲ್ಲಿ ವಿಷ್ಣು ರೂಪದಲ್ಲಿ ಕಾಣಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿರುವ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಸುಪ್ರೀಮ್ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ.
ಇದೇ ವೇಳೆ ಧೋನಿ ತನ್ನ ವಿರುದ್ಧದ ಪ್ರಕರಣವನ್ನು ಅನಂತಪುರದಿಂದ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸಲು ಸುಪ್ರೀಮ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.ನ್ಯಾಯಾಲಯವು ಅದರಂತೆ ಅನಂತಪುರ ನ್ಯಾಯಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಧೋನಿಗೆ ಅನಂತಪುರದ ನ್ಯಾಯಾಲಯ ಜ.19ರಂದು ಎರಡನೆ ಬಾರಿ ಧೋನಿಗೆ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಜ.7ರಂದು ಹೊರಡಿಸಿದ ಆದೇಶದಲ್ಲಿ ಧೋನಿ ಫೆ.25ರ ಮೊದಲು ಹಾಜರಾಗದಿದ್ದರೆ ಅವರನ್ನು ಬಂಧಿಸುವಂತೆ ನ್ಯಾಯಾಲಯ ತಿಳಿಸಿತ್ತು.
Next Story





