ಪತ್ರಿಕಾ ವ್ಯವಸ್ಥೆ ಹದೆಗೆಟ್ಟಿದೆ : ಗಣೇಶ್ ಕಾಮತ್ ಕಳವಳ

ಮೂಡಬಿದರೆ: ಇಂದು ಪತ್ರಿಕಾ ವ್ಯವಸ್ಥೆ ಅದಗೆಟ್ಟಿದೆ. ಪತ್ರಿಕೋದ್ಯಮ ವ್ಯಾಪಾರೋದ್ಯಮವಾಗಿದೆ. ಪ್ರಸ್ತುತ ಸುದ್ದಿಗೆ ಮಹತ್ವವಿಲ್ಲ. ಯಾವುದೇ ಪತ್ರಿಕೆಗಳು ಪತ್ರಕರ್ತರಿಗೆ ಮುಕ್ತವಾದ ಸ್ವಾತಂತ್ರ್ಯ ಕೊಟ್ಟಿಲ್ಲ. ಅವರಿಗೆ ವೇತನವು ತುಂಬಾ ಕಡಿಮೆಯಿದೆ. ಪತ್ರಕರ್ತರೇ ಸುದ್ದಿಯ ಜೊತೆಗೆ ಜಾಹಿರಾತು ನೀಡುವ ಪರಸ್ಥಿತಿ ಉಂಟಾಗಿದೆ ಎಂದು ಮೂಡಬಿದರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಕಾಮತ್ ಕಳವಳ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಮೂಹ ಸಂವಹನ ಸ್ನಾತ್ತಕೋತ್ತರ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ್ದ ಅಭಿವ್ಯಕ್ತಿ ಮಾಧ್ಯಮ ಕ್ಲಬ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಮಾಧ್ಯಮದವರು ಇಂದು ಸೇವೆ ಮಾಡುತ್ತಿಲ್ಲ ವ್ಯಾಪಾರ ಮಾಡುತ್ತಿದ್ದಾರೆ. ಅದರ ಹೊರತಾಗಿಯು ಪತ್ರಕರ್ತರ ಕೆಲಸ ಶ್ರೇಷ್ಟ ಕೆಲಸ. ಆದರೆ ತುಂಬಾ ಒತ್ತಡದ ಮದ್ಯೆ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಪತ್ರಕರ್ತನಾದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಜನರ ಧ್ವನಿಯಾಗಿ ಪತ್ರಕರ್ತರು ನಿಲ್ಲಬೇಕು. ಪತ್ರಕರ್ತರು ಸಮಾಜಕ್ಕೆ ಏನು ಕೊಡಬೇಕು ಎನ್ನುವ ತುಡಿತ ಇರಬೇಕು. ಬರೆಯುವುದಕ್ಕಾಗಿ ಬದುಕಿದರೆ ಅದು ಸೇವೆ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಕಾಲೇಜಿನ ಪ್ರಿನ್ಸಿಪಾಲರಾದ ಕುರಿಯಾನ್, ಪ್ರಪಂಚದಲ್ಲಿ ಪ್ರತಿಯೊಂದು ಜೀವಿಯು ಕಡೆಗೆ ಬಯಸುವುದು ಅಭಿವ್ಯಕ್ತಿ. ಪ್ರತಿಯೊಂದು ಜೀವಿಗೂ ಭಿನ್ನ ಭಿನ್ನವಾದ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅಭಿವ್ಯಕ್ತಿಯನ್ನು ನಂಬುವ ಜನರು ಸಮಾಜದ ಸಮುದಾಯದ ಅಡಿಯಲ್ಲಿದ್ದಾರೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಮತ್ತೊಂದು ಅಭಿವ್ಯಕ್ತಿಗೆ ಸಾಧ್ಯತೆ ಆಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಸಂವಾದ ನಡೆಯಿತು. ಇಲ್ಲಿ ಗ್ರಾಮೀಣ ಪತ್ರಿಕೆಗಳ ಮಹತ್ವ, ಹಾಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಮೂಡಬಿದರೆಯ ಕಾರ್ಯನಿರತ ಪತ್ರಕರ್ತರಿಂದ ರಸವತ್ತಾದ ವಿಚಾರಧಾರೆಗಳು ಹೊರಹೊಮ್ಮಿದವು. ಈ ಸಂವಾದ ಕಾರ್ಯಕ್ರಮದಲ್ಲಿ ಎಕ್ಸ್‌ಲೆಂಟ್ ಕಾಲೇಜಿನ ಉಪನ್ಯಾಸಕಿ ರಶ್ಮೀತಾ ಯುವರಾಜ್ ಜೈನ್, ಪ್ರಭ ಆಸ್ಪತ್ರೆಯ ವೈದ್ಯ ಕೃಷ್ಣಮೋಹನ್ ಪ್ರಭು, ಆಳ್ವಾಸ್‌ನ ಪಿಯುಸಿ ಕನ್ನಡ ಅದ್ಯಾಪಕ ವೇಣುಗೋಪಾಲಶೆಟ್ಟಿ, ಬಯಲೋಜಿ ವಿಭಾಗದ ರುಚಿಕಾ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮೂಡಬಿದರೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಕಾಮತ್ ಹಾಗೂ ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮೂಹ ಸಂವಹನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್‌ರಾಮ್ ನಿರೂಪಿಸಿದರೆ, ಪತ್ರಿಕೋದ್ಯ ವಿಭಾಗದ ಉಪನ್ಯಾಸಕ ಶ್ರೀನಿವಾಸ್ ಪೇಜತ್ತಾಯ್ ವಂದಿಸಿದರು.









