ಸಹಬಾಳ್ವೆ ಸಾಗರ: ರಾಷ್ಟ್ರೀಯ ಸಮಾವೇಶ
ಕ ಕೋ ಸೌ ವೇ ನೇತೃತ್ವದಲ್ಲಿ ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶ ಸಹಬಾಳ್ವೆ ಸಾಗರದ ತಯಾರಿಗಳು ನಡೆಯುತ್ತಿವೆ.
ನಾಡಿನ ಎಂಟು ದಿಕ್ಕುಗಳಿಂದಲೂ ಅರಬಿ ಕಡಲ ತಡಿಗೆ ಬಂದು ಸೇರಲಿರುವ 'ಸಹಬಾಳ್ವೆಯ ನದಿ ಜಾಥಾಗಳು, ಯಕ್ಷಗಾನ, ನಾಟಕ, ಸೂಫಿ-ವಚನ ಗಾಯನ, ಹೋರಾಟದ ಹಾಡುಗಳು, ತುಳು, ಬ್ಯಾರಿ, ಕೊಂಕಣಿ ಜನಪದ ನೃತ್ಯ ಕಲೆಗಳು ಅನಾವರಣಗೊಳ್ಳುತ್ತಿವೆ.
ಲಕ್ಷ್ಮಣ್ ಮರಡಿತೋಟ ಅವರ ನೇತೃತ್ವದಲ್ಲಿ ಕೂಡಲ ಸಂಗಮದಿಂದ 'ನೇತ್ರಾವತಿ, ಮಲಪ್ರಭಾ ಜಾಥಾ ಹೊರಡಲಿದೆ. ಹಾಗೂ ಅನೀಷ್ ಪಾಷ ಮತ್ತು ಸಿಂಚನ ಮೋಹನ್ ಅವರ ನೇತೃತ್ವದಲ್ಲಿ ಶಿಶುನಾಳದಲ್ಲಿ ಶರಾವತಿ ಜಾಥ ರಂಜಾನ್ ದರ್ಗ ಅವರಿಂದ ಉದ್ಘಾಟನೆಗೊಂಡು ಹೊರಡಲಿಕ್ಕಿದೆ.
ಆಂಕೋಲದಿಂದ ರಮೇಶ್ ಅವರ ನೇತೃತ್ವದಲ್ಲಿ ಸೌಪರ್ಣಿಕಾ ಮತ್ತು ಶಾಲ್ಮಲಾ ಜಾಥ ಹೊರಡಲು ಸಿದ್ದವಾಗುತ್ತಿವೆ.
ಎನ್ ವೆಂಕಟೇಶ್ ಮತ್ತು ಸಿ.ಜಿ ಗಂಗಪ್ಪ ಅವರ ನೇತೃತ್ವದಲ್ಲಿ ಕುಮಾರಧಾರ ಮತ್ತು ಫಲ್ಗುಣಿ ಜಾಥ ಬಂಗಾರಪೇಟೆಯಲ್ಲಿ ನಾಲ್ಕು ಪತ್ರಿಕಾ ಗೋಷ್ಠಿಗಳನ್ನು ಮುಗಿಸಿ, ಚಿಕ್ಕಬಳ್ಳಾಪುರದಿಂದ ಹೊರಟು ನಮ್ಮ ಸಹಬಾಳ್ವೆಯ ಸಾಗರ ಸೇರಲಿವೆ.
ಸೀತಾ-ಭದ್ರಾ, ಶಾಂಭವೀ-ಕಾವೇರಿ, ಕಾಳೀ ಮತ್ತು ಕೃಷ್ಣ ಜಾಥಾ ಎಲ್ ಕೇಶವ್ ಮೂರ್ತಿ, ಗೌಸ್ ಮೋಯಿದ್ದೀನ್, ಮಲ್ಲಯ್ಯ ಕಮತಗಿ ಅವರ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಮತ್ತು ಬಾಬಾಬುಡನಗಿರಿ ಹಾಗೂ ತಿಂಥಣಿ ಮೌನೇಶ್ವರ ಉದ್ಘಾಟನೆಗೊಂಡು ಹೊರಡಲು ತಯಾರಾಗಿದೆ.







