ಸ್ವಂತ ಮದುವೆ ನಿಲ್ಲಿಸಲಿಕ್ಕಾಗಿ ದರೋಡೆ ನಾಟಕವಾಡಿದ ಯುವತಿ!

ಪತ್ತನಂ ತಿಟ್ಟ: ತನ್ನ ಮದುವೆ ನಿಲ್ಲಿಸಲಿಕ್ಕಾಗಿ ಯುವತಿ ತನ್ನನ್ನು ಕಟ್ಟಿಹಾಕಿ 80 ಪವನ್ ಬಂಗಾರ ದೋಚಲಾಗಿದೆ ಎಂಬ ರೀತಿ ನಾಟಕವಾಡಿದ ಘಟನೆ ಇಲ್ಲಿಗೆ ಸಮೀಪ ನಡೆದಿದ್ದು. ಅಂತಿಮವಾಗಿ ಪೊಲೀಸರು ಯುವತಿಯ ವಿಚಾರಣೆ ನಡೆಸುತ್ತಿದ್ದಾರೆ. ಆದಿತ್ಯವಾರ ಮದುವೆ ನಿಶ್ಚಯಿಸಲಾಗಿದ್ದ ಈ ಯುವತಿ ಆರನ್ಮಮಳ ನೀರ್ವಿಲಾಗಂನ ನಿವಾಸಿಯಾಗಿದ್ದಾಳೆ.
ನಿನ್ನೆ ಬೆಳಗ್ಗೆ ತಂದೆತಾಯಿ ಚೆಂಙನ್ನೂರ್‌ಗೆ ಹೋಗಿದ್ದಾಗ ಕಾರ್‌ನಲ್ಲಿ ಬಂದ ಮುಖವಾಡ ಧರಿಸಿದ್ದ ನಾಲ್ವರ ತಂಡ ತನ್ನನ್ನು ಬಲವಾಗಿ ಚೂಡಿದಾರ್‌ಶಾಲ್ ಬಳಸಿ ಸ್ಟೈರ್‌ಕೇಸ್‌ಗೆ ಕಟ್ಟಿಹಾಕಿ ಬಳಿಕ ಬೀಗದ ಕೀ ಪಡೆದು ಕಪಾಟಿನಿಂದ ಚಿನ್ನಾಭರಣಗಳನ್ನು ದೋಚಿದೆ ಎಂದು ಯುವತಿ ಹೇಳಿಕೊಂಡಿದ್ದಳು.
ತಂದೆತಾಯಿ ಮನೆಗೆ ಮರಳಿದಾಗ ಯುವತಿ ಕಟ್ಟಿಹಾಕಿದ್ದ ಸ್ಥಿತಿಯಲ್ಲಿದ್ದಳು. ಒಳಗಿನ ಕೋಣೆಯಲ್ಲಿ ನೋಡಿದಾಗ ಚಿನ್ನ ಕಳವಾಗಿರುವುದು ತಿಳಿದು ಬಂದಿತ್ತು. ಸೋಫಾಸೆಟ್ ಬಾಗಿಲಿಗೆ ಅಡ್ಡಲಾಗಿರಿಸಿ ಬಾಗಿಲು ತೆರೆಯಲು ಕಷ್ಟಪಡಬೇಕಾಗಿತ್ತು ಎಂದ ಯುವತಿಯ ತಂದೆ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಭಾರೀ ದರೋಡೆ ಎಂಬ ನೆಲೆಯಲ್ಲಿ ಡಿವೈಎಸ್ಪಿ ಸಂತೋಷ್ ಕುಮಾರ್‌ರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಯುವತಿಯನ್ನು ಪ್ರಶ್ನಿಸಿದಾಗ ಪರಸ್ಪರ ವಿರುದ್ಧ ಹೇಳಿಕೆ ನೀಡುವುದನ್ನು ಕಂಡು ಪೊಲೀಸರಿಗೆ ಶಂಕೆಯಾಗಿತ್ತು. ಬೆಳಗ್ಗೆ ಹನ್ನೊಂದೂವರೆಯಿಂದಸಂಜೆ ಆರು ಮೂವತ್ತರವರೆಗೆ ಯುವತಿಯನ್ನು ಪೊಲೀಸರು ಪ್ರಶ್ನಿಸಿದಾಗ ಯುವತಿ ಇದರ ಸೂತ್ರಧಾರಿ ತಾನೆ ಎಂಬ ಸತ್ಯವನ್ನು ತಿಳಿಸಿದ್ದಳು. ಬಂಗಾರವನ್ನು ಬೇರೆ ಕಡೆ ಇಟ್ಟುದು ಮತ್ತು ಚೂಡಿದಾರ್‌ನಿಂದಕಟ್ಟಿಕೊಂಡಿರುವುದು ತಾನೆ ಎಂದು ಯುವತಿ ಒಪ್ಪಿಕೊಂಡಿದ್ದಾಳೆ. ತನ್ನ ಮದುವೆ ನಿಲ್ಲಿಸಲಿಕ್ಕಾಗಿ ಯುವತಿ ಹೀಗೆ ಮಾಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ.







