ಗೆಳತಿಗೆ ಕಿರುಕುಳ ನೀಡಿದ ತಂದೆಯನ್ನು ಪೊಲೀಸರಿಗೆ ಹಿಡಿದು ಕೊಟ್ಟ ಹನ್ನೊಂದರ ಬಾಲೆ!

ತಿರುವನಂತಪುರಂ:ಗೆಳತಿಗೆ ಕಿರುಕುಳ ನೀಡಿದ್ದ ತಂದೆಯನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಹನ್ನೊಂದು ವರ್ಷದ ಬಾಲಕಿ ಗಣನೀಯ ಪಾತ್ರ ನಿರ್ವಹಿಸಿದ್ದಾಳೆ. ತಿರುವನಂತಪುರದ ಕಾಟ್ಟಕ್ಕಡ ಆಚ್ಚಾಲ್ ನಿವಾಸಿ ಅಜಯ್ ತನ್ನ ಮಗಳ ಆಟದ ಗೆಳತಿಗೆ ಗುಟ್ಟಾಗಿ ಕಿರುಕುಳ ನೀಡಿದ್ದ. ಇದನ್ನು ತಿಳಿದ ಮಗಳು ತನ್ನ ಗೆಳತಿಯ ಜೊತೆ ಶಾಲಾ ಅಧ್ಯಾಪಕರ ಬಳಿ ಬಂದು ದೂರು ನೀಡಿದ್ದಳು.
ಅಧ್ಯಾಪಕರು ಚೈಲ್ಡ್ ಹೆಲ್ಫ್ ಲೈನ್ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿದ್ದರು. ಅವರು ಪೊಲೀಸರಿಗೆ ದೂರು ನೀಡುವ ಮೂಲಕ ಅಜಯನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜನವರಿ ಇಪ್ಪತ್ತಾರರಂದು ಆತ ಮಗಳ ಗೆಳತಿಗೆ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ. ಅಜಯ್‌ನ ವಿರುದ್ಧ ಅವನ ಪತ್ನಿ ಕೌಟುಂಬಿಕ ಹಿಂಸೆಗಾಗಿ ದೂರು ನೀಡಿದ್ದು ಆ ಪ್ರಕರಣ ಈಗಲೂ ಮುಂದುವರಿಯುತ್ತಿದೆ.
Next Story





